ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ 3 ನೇ ವರ್ಷದ ಶಿಬಿರ “ಚಿಣ್ಣರ ಕಲರವ 2024” ಸಮಾರೋಪ ಸಮಾರಂಭ

0

ಸುಳ್ಯದ ಅಂಬಟೆಡ್ಕ ದಲ್ಲಿರುವ ವರ್ತಕರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ 3 ನೇ ವರ್ಷದ ಶಿಬಿರ “ಚಿಣ್ಣರ ಕಲರವ 2024” ರ
ಸಮರೋಪ ಸಮಾರಂಭ ಕಾರ್ಯಕ್ರಮ ಎ.8ರಂದು ನಡೆಯಿತು.

ಮುಖ್ಯ ಅತಿಥಿಯಾಗಿ ಹಿರಿಯ ವರದಿಗಾರರಾದ ಗಂಗಾಧರ ಮಟ್ಟಿ ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕು.ರಮ್ಯಶ್ರೀ ನಡುಮನೆ, ಮಾಯಿಲಪ್ಪ , ಸಂಸ್ಥೆಯ ಅಧ್ಯಕ್ಷರಾದ ಶುಭಕರ ಬಿ.ಸಿ., ಸಂಚಾಲಕಿ ಗೀತಾಂಜಲಿ ಟಿ.ಜಿ. ಉಪಸ್ಥಿತರಿದ್ದರು.

ಒಂದು ವಾರ ನಡೆದ ಶಿಬಿರದಲ್ಲಿ ಜಿಲ್ಲೆಯ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ಆಟೋಟಗಳು ಹಾಗೂ ಕಲಿಕಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಹಮ್ಮಿಕೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಹಾಗೂ ಪೋಷಕರು ಶಿಬಿರದ ಕುರಿತು ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.