ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯ

0

ಮೊದಲ ಬ್ಯಾಚ್ ನಲ್ಲಿ ಶೇ. 98 ಫಲಿತಾಂಶ

ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಥಮ ಸಾಲಿನ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಪರೀಕ್ಷೆ ಎದುರಿಸಿದ 45 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದು, ಶೇ 98 ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 15 ಮತ್ತು ವಾಣಿಜ್ಯ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಸಾತ್ವಿಕ್ ಯಚ್ ಯಸ್ 592 ಪಡೆದಿದ್ದು ಪಿ ಸಿ ಮ್ ಸಿ ಯಲ್ಲಿ 100 ಪೂರ್ಣಅಂಕ ಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿರುತ್ತಾನೆ. ಹಾಗೂ ಕು. ತೃಪ್ತಾ ಎಂ ಟಿ 579 ಅಂಕ ಪಡೆದು ದ್ವಿತೀಯ ಸಾಧನೆ ಪಡೆದಿರುತ್ತಾಳೆ.

ವಾಣಿಜ್ಯ ವಿಭಾಗದಲ್ಲಿ ಶ್ರೇಯಾ 591 ಅಂಕ ಮತ್ತು ದಿಶಾ 590 ಅಂಕ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾಳೆ.

ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು,
ಪ್ರಾoಶುಪಾಲರು ಮತ್ತು ಎಲ್ಲಾ ಉಪನ್ಯಾಸಕರು ಮತ್ತು ಹೆತ್ತವರ ನ್ನು ಕುಮಾರಸ್ವಾಮಿ ವಿದ್ಯಾಲಯ ಆಡಳಿತ ಮಂಡಳಿ ಅಭಿನಂದಿಸಿದೆ.