ಗುತ್ತಿಗಾರು ಸರಕಾರಿ ಪದವಿ ಪೂರ್ವ ಕಾಲೇಜು : ಶೇ. 96 ಫಲಿತಾಂಶ

0

6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ

2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ ವಾಣಿಜ್ಯ ವಿಭಾಗ 96% ಹಾಗೂ ಕಲಾ ವಿಭಾಗ 96 ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗದಿಂದ ಒಟ್ಟು 51 ವಿದ್ಯಾರ್ಥಿಗಳು ಹಾಜರಾಗಿದ್ದು ಒಟ್ಟಾರೆಯಾಗಿ 96 ಶೇಕಡಾ ಫಲಿತಾಂಶ ದಾಖಲಾಗಿದೆ.

ಕಲಾ ವಿಭಾಗದಲ್ಲಿ ರಮ್ಯಾ.ಎನ್.ವಿ 560 ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಪ್ರಥಮ ಶ್ರೇಣಿಯಲ್ಲಿ 16 ದ್ವಿತೀಯ ದರ್ಜೆಯಲ್ಲಿ 06 ತೃತೀಯ ಶ್ರೇಣಿಯಲ್ಲಿ 02 ಹಾಗೂ ವಾಣಿಜ್ಯ ವಿಭಾಗ ದೇವಿಕಾ.ಕೆ 547, ಯುಕ್ತಿ.ಕೆ.ಎಂ 547, ದೀಕ್ಷಾ.ಕೆ.ಸಿ 545, ಪೂಜಾ.ಕೆ 526, ದೀಪಿಕಾ.ಹೆಚ್.ಪಿ 524, ಪ್ರಥಮ ಶ್ರೇಣಿಯಲ್ಲಿ 16 ದ್ವಿತೀಯ ಶ್ರೇಣಿಯಲ್ಲಿ 03 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.