ಕಾಂತಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಫೆ. 17 ರಂದು ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಜ. 19ರಂದು ನಡೆಯಿತು.
ದೇವಸ್ಥಾನದ ಮೊಕ್ತೇಸರರಾದ ಭಾಸ್ಕರ ರಾವ್ ಬಯಂಬು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ರವೀಂದ್ರ ಹೆಚ್.ಆರ್, ವಾಸುದೇವ ಪುತ್ಥಿಲ, ಪರಮೇಶ್ವರ ಹನಿಯಡ್ಕ, ನಾಗೇಶ್ ಕೊಚ್ಚಿ, ಚಂದ್ರಶೇಖರ ದೊಡ್ಡೇರಿ, ದಿನೇಶ್ ಮುಳ್ಯ, ಸತೀಶ್ ಅತ್ಯಡ್ಕ, ದಯಾನಂದ ದೊಡ್ಡೇರಿ, ಜ್ಞಾನಾನಂದ ಚಿಮ್ಟಿಕಲ್ಲು, ಮೀರಾ ಕಾಂತಮಂಗಲ, ಅರುಣ್ ಕುಮಾರ್ ನೆಲ್ಲಿಕುಂಜ ರಾಧಾಕೃಷ್ಣ ಹನಿಯಡ್ಕ ಸೇರಿದಂತೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು