ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಮುಸ್ಲಿಂ ಸಮುದಾಯದ ಸಮಾನ ಮನಸ್ಕ ಮುಸ್ಲಿಂ ಮುಖಂಡರ ಸಭೆ ಇಂದು ಸುಳ್ಯ ಗಾಂಧಿನಗರದಲ್ಲಿ ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಐ ಕೆ ಮೊಹಮ್ಮದ್ ಇಕ್ಬಾಲ್ ಎಲಿಮಲೆ ವಹಿಸಿದ್ದರು.
ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಮುಸ್ಲಿಂ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ಬರುವ ಲೋಕಸಭಾ ಚುನಾವಣೆಯಲ್ಲಿ ಈ ಮೊದಲು ವಿವಿಧ ರಾಜಕಿಯ ಪಕ್ಷದಲ್ಲಿ ಗುರುತಿಸಿಕೊಂಡ ಮುಸ್ಲಿಂ ಸಮುದಾಯದ ಮುಖಂಡರುಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವರೀತಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎನ್ನುವ ಬಗ್ಗೆ ಚರ್ಚಿಸಲಾಯಿತು. ಈ ಬಗ್ಗೆ ಮುಂದಿನ ಒಂದೆರಡು ದಿನಗಳಲ್ಲಿ ಮತ್ತೆ ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಳ್ಳಲು ಇದರ ನೇತೃತ್ವವನ್ನು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆ ಹಾಗೂ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್ ರವರಿಗೆ ಜವಾಬ್ದಾರಿ ನೀಡಲಾಯಿತು.
ಸಭೆಯಲ್ಲಿ ಮುಖಂಡರುಗಳಾದ ಪಿ ಎ ಉಮ್ಮರ್ ಹಾಜಿ ಗೂನಡ್ಕ,ಸುಳ್ಯ ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್,ರಫೀಕ್ ಐವತ್ತೂಕ್ಲು,ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಎ ಕೆ ಹಸೈನಾರ್ ಕಲ್ಲುಗುಂಡಿ, ಇಸ್ಮಾಯಿಲ್ ಕಳಂಜ, ಇಬ್ರಾಹಿಂ ಹಾಜಿ ಅಜ್ಜಾವರ, ಎ ಬಿ ಮೊಹಿದ್ದೀನ್ ಬಾಳಿಲ, ಕೆ ಎಮ್ ಇಬ್ರಾಹಿಂ ಪಡ್ಪಿನಂಗಡಿ, ಎನ್ ಇಸ್ಮಾಯಿಲ್ ಕಳಂಜ, ಕೆ ಎಂ ಹಮೀದ್ ಹಾಜಿ ಅಲ್ಪ ಬೆಳ್ಳಾರೆ, ಅಬ್ದುಲ್ ಖಾದರ್ ಮೊಟ್ಟೆಂಗರ್, ಹನೀಫ್ ಮೆತಡ್ಕ, ಅಬೂಬಕ್ಕರ್ ಸಿದ್ದಿಖ್ ಜೀರ್ಮುಖಿ, ಹಸೈನಾರ್ ಅಜ್ಜಾವರ, ಅಬೂಬಕ್ಕರ್ ಕಾವು, ಫೈಝಲ್ ಜೀರ್ಮುಖಿ, ಮೊಹಮ್ಮದ್ ಹಾಜಿ ನಿಂತಿಕಲ್ಲು, ಪೋಕರ್ ಬ್ಯಾರಿ ಮುರುಳ್ಯ,ಉಮ್ಮರ್ ಫಾರೂಕ್ ಕಳಂಜ ಮೊದಲಾದವರು ಉಪಸ್ಥಿತರಿದ್ದರು.