ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ವತಿಯಿಂದ ಏಪ್ರಿಲ್ 16 ರಂದು 18 ವರ್ಷ ಕೆಳಗಿನ 13 ವರ್ಷ ಮೇಲ್ಪಟ್ಟ ಬಾಲಕ – ಬಾಲಕಿಯರ ವಾಲಿಬಾಲ್ ತರಬೇತಿ ಶಿಬಿರ ಸುಳ್ಯದ ಜ್ಯೂನಿಯರ್ ಕಾಲೇಜು ಕೆಳಗಿನ ಮೈದಾನದಲ್ಲಿ ಆರಂಭ ಗೊಂಡಿತು. ಮುಂದಿನ 8 ದಿನಗಳ ಕಾಲ ಶಿಬಿರ ನಡೆಯಲಿದೆ. ರಾಷ್ಟ್ರೀಯ ವಾಲಿಬಾಲ್ ತರಬೇತುದಾರದ ಮನೋಜ್ ರವರು ತರಬೇತುದರರಾಗಿದ್ದಾರೆ. ರಾಜೀವಿ ಶೆಟ್ಟಿ ಹುಡುಗಿಯರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
2021ರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದ ಉಳಿಕೆ ಹಣದ ಸಹಾಯದಿಂದ ಕಳೆದ ಬಾರಿ ಕೂಡ ತರಬೇತಿ ಶಿಬಿರ ನಡೆದಿದ್ದು, ಈ ಬಾರಿ ಕೂಡ ಅದೇ ರೀತಿಯಿಂದ ಉಳಿಕೆ ಹಣದ ಸಹಾಯದಿಂದ ಈ ಶಿಬಿರ ನಡೆಯುತ್ತಿದೆ ಎಂದು ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ರಾದ ದೊಡ್ಡಣ್ಣ ಬರೆಮೇಲ್ ,ತಿಳಿಸಿದ್ದಾರೆ