ಕಳೆದ 10 ವರ್ಷಗಳಿಂದ ಕೇಂದ್ರದ ಬಿಜೆಪಿ ಸರಕಾರ ಭಾಷೆ, ಸಂಸ್ಕೃತಿ, ಧರ್ಮ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಉಂಟು ಮಾಡಲು ಯತ್ನಿಸುತ್ತಿದೆ. ಇದಕ್ಕೆ ಆಸ್ಪದ ನೀಡದೇ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಎಲ್ಲರು ಕೈ ಜೋಡಿಸಬೇಕು ಎಂದು ಅಮರ ಸುಳ್ಯ ನಾಗರಿಕ ವೇದಿಕೆ ಮನವಿ ಮಾಡಿದೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮರ ಸುಳ್ಯ ನಾಗರಿಕ ವೇದಿಕೆಯ ಸಂಚಾಲಕ ಗೋಪಾಲ ಪೆರಾಜೆ, ಸಂವಿಧಾನ ಬದಲಾವಣೆ ಮಾಡುವುದು ಬಿಜೆಪಿಯ ಅಜೆಂಡಾವಾಗಿದೆ. ಕೇಂದ್ರ ಸರಕಾರದ ಸಚಿವರಿಂದಲೇ ಬದಲಾವಣೆಯ ಮಾತುಗಳು ಬರುತ್ತಿದೆ ಎಂದ ಅವರು ಸಂವಿಧಾನ ಬದಲಾವಣೆ ಬಿಜೆಪಿಯ ಸ್ಪಷ್ಟವಾದ ಸಾಮಾನ್ಯ ಕಾರ್ಯಕ್ರಮಗಳಲ್ಲಿ ಒಂದು ಎಂದು ಗೊತ್ತಾಗುತ್ತದೆ.
ಜಗತ್ತಿನ ಸರ್ವಶ್ರೇಷ್ಟ ಸಂವಿಧಾನಗಳಲ್ಲೊಂದಾದ ಭಾರತೀಯ ಸಂವಿಧಾನದ ಮೇಲೆ ವೈಷಮ್ಯ ಯಾಕೆ ಎಂದು ತಿಳಿಯುತ್ತಿಲ್ಲ.
ಕೇಂದ್ರ ಸರಕಾರ ವಿರೋಧ ಪಕ್ಷಗಳ ಮೇಲೆ ಮಾತ್ರ ದ್ವೇಷದ ರಾಜಕಾರಣ ನಡೆಸಲು ದೇಶದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ.
ಭ್ರಷ್ಟಾಚಾರ ವಿರೋಧಿಸುತ್ತಲೇ ಬಂದ ಕೇಂದ್ರ ಸರಕಾರಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಯಾವುದೇ ನಿಲುವುಗಳನ್ನು ಹೊಂದಿಲ್ಲ. ಈ ಎಲ್ಲಾ ವಿಷಯಗಳನ್ನು ಮತದಾರರು ಮತದಾನ ಮಾಡುವ ಮುಂಚಿತವಾಗಿ ಆಲೋಚನೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭರತ್ ಕುಕ್ಕುಜಡ್ಕ, ಪ್ರಮೀಳಾ ಪೆಲ್ತಡ್ಕ, ದಿವಾಕರ ಪೈ ಮಜಿಗುಂಡಿ, ಕರುಣಾಕರ ಪಲ್ಲತಡ್ಕ, ಭಾರತಿ ಚೆಂಬು ಇದ್ದರು.