ಮನೆಯಲ್ಲಿಯೇ ನಿಲ್ಲಿಸಿದ ಕಾರಿಗೂ ಟೋಲ್ ಫೀ !

0

ಶೆಡ್ ನಲ್ಲಿ ನಿಲ್ಲಿಸಿದ ಕಾರಿಗೆ ಫಾಸ್ಟ್ ಟ್ಯಾಗ್ ಖಾತೆಯಿಂದ ಕಡಿತಗೊಂಡ ಹಣ

ನಿವೃತ್ತ ಶಿಕ್ಷಕರಿಗಾಯ್ತು ವಿಚಿತ್ರ ಟೋಲ್ ಅನುಭವ

ಬಹುತೇಕ‌ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಗೇಟ್ ಎದುರಾಗುವುದು ಮತ್ತು ಅಲ್ಲಿ ಹಣ ಪಾವತಿಸಿ ಮುಂದೆ ತೆರಳುವುದು ಅಥವಾ ಫಾಸ್ಟ್ ಟ್ಯಾಗ್ ಮೂಲಕ ಹಣ ಕಡಿತಗೊಳ್ಳುವುದು ಸಹಜ. ಆದರೆ ಇಲ್ಲೊಬ್ಬರು ಮನೆಯ ಕಾರು ಶೆಡ್ ನಲ್ಲಿ ಕಾರು ನಿಲ್ಲಿಸಿದ್ದರೂ ಇವರ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತಗೊಂಡು ಅಚ್ಚರಿಗೆ ಕಾರಣವಾದ ಘಟನೆಯೊಂದು ಮರ್ಕಂಜ ದಿಂದ ವರದಿಯಾಗಿದೆ.

ಮರ್ಕಂಜ ಗ್ರಾಮದ ತೇರ್ಥಮಜಲು ನಿವಾಸಿ, ನಿವೃತ್ತ ಶಿಕ್ಷಕ ಅಚ್ಚುತ ಮಾಸ್ತರ್ ರವರ ಕಾರು ಕೆಎ 21 ಎಂಎ 1629 ನಂಬರಿನ ಕಾರಿಗೆ 19-04-2024ರ ರಾತ್ರಿ 12.04 ಗಂಟೆಗೆ ಬೆಂಗಳೂರಿನ ನೆಲಮಂಗಲ ಪ್ಲಾಝಾದಲ್ಲಿ ಹಾದು ಹೋದಂತೆ ಫಾಸ್ಟ್ ಟ್ಯಾಗ್ ಖಾತೆಯಿಂದ ರೂ.55. ಕಡಿತವಾಗಿರುವ ಮೆಸೇಜ್ ಅಚ್ಚುತ ಮಾಸ್ತರ್ ರವರ ಮೊಬೈಲ್ ಫೋನ್ ಗೆ ಬಂತು. ವಾಸ್ತವವಾಗಿ ಅಚ್ಚುತ ಮಾಸ್ತರ್ ರವರು ಅಂದು‌ ಮರ್ಕಂಜದ ಮನೆಯಲ್ಲಿಯೇ ಇದ್ದರು. ಬೆಳಿಗ್ಗೆ ಎದ್ದು ಫಾಸ್ಟ್ ಟ್ಯಾಗ್ ಮೆಸೇಜ್ ನೋಡಿ ದಂಗಾಗಿದ್ದಾರೆ. ಬಳಿಕ ನೆಲಮಂಗಲ ಪ್ಲಾಝಾಕ್ಕೆ ದೂರವಾಣಿ ಕರೆ ಮಾಡಿದಾಗ ಈ ಬಗ್ಗೆ ದೂರು ದಾಖಲು ಮಾಡುವಂತೆ ತಿಳಿಸಿದ್ದು, ತಾಂತ್ರಿಕ ಸಮಸ್ಯೆಯಿಂದ‌ ಆ ರೀತಿ ಆಗಿರಬಹುದು.‌ ಪರಿಶೀಲಿಸಿ ಹಣ ಖಾತೆಗೆ ಪುನಃ ಜಮೆ ಮಾಡುವುದಾಗಿ ತಿಳಿಸಿರುವುದಾಗಿ ಅಚ್ಚುತರವರು ಸುದ್ದಿಗೆ ತಿಳಿಸಿದ್ದಾರೆ.

ಕಾರಿನಲ್ಲಿ ಹೋಗದೇ ಇದ್ದರೂ ಹಣ ಖಡಿತಗೊಂಡಿರುವುದು ಇದೀಗ ಸಾರ್ವಜನಿಕರಲ್ಲಿ ಆತಂಕಕ್ಕೂ ಕಾರಣವಾಗಿದೆ.‌