ಎನ್ನೆಂಸಿ, ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ “ಫ್ಲೇಮ್ ಲೆಸ್ ಫೀಸ್ಟ್” ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ

0


ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಏಪ್ರಿಲ್ 20 ಶನಿವಾರದಂದು “ಫ್ಲೇಮ್ ಲೆಸ್ ಫೀಸ್ಟ್” ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಸಮಾಜಕಾರ್ಯ ವಿಭಾಗ ಮುಖ್ಯಸ್ಥೆ ಕೃಪಾ ಎ ಎನ್, ಹಿಂದಿ ಉಪನ್ಯಾಸಕಿ ಮಮ್ತ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಉಪನ್ಯಾಸಕ ಹರಿಪ್ರಸಾದ್ ಎ ವಿ ಸಹಕರಿಸಿದರು.

ನೇಚರ್ ಕ್ಲಬ್ ಕಾರ್ಯದರ್ಶಿ ಪವಿತ್ರಾಕ್ಷಿ, ಕೋಶಾಧಿಕಾರಿ ಮಧಿವಧಿನಿ, ಸ್ಪರ್ಧಾ ಸಮಿತಿ ಸಂಚಾಲಕಿ ಮಹಿಮಾ, ಕೀರ್ತಿಕಾ, ಲಿಖಿತ, ಯಶಿಕಾ ಮತ್ತು ಕ್ಲಬ್ ನ ಇನ್ನಿತರ ಸದಸ್ಯರು ಸ್ಪರ್ಧೆಯನ್ನು ಆಯೋಜಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಮತ್ತು ಉಪನ್ಯಾಸಕರಾದ ಅಜಿತ್ ಕುಮಾರ್, ಹರ್ಷಕಿರಣ, ಪಲ್ಲವಿ ಮಾರ್ಗದರ್ಶನ ನೀಡಿದರು. ಲ್ಯಾಬ್ ಸಹಾಯಕಿ ಸಿಬ್ಬಂದಿ ಭವ್ಯ ಸಹಕರಿಸಿದರು.

ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಶುಚಿ ರುಚಿಯಾದ ವೈವಿಧ್ಯಮಯ ಆಡುಗೆಗಳನ್ನು ತಯಾರಿಸಿ ಅವುಗಳಲ್ಲಿ ಇರುವ ಪೋಷಕಾಂಶಗಳ ಮಹತ್ವಗಳನ್ನು ವಿವರಿಸಿ ಸ್ಪರ್ಧಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.