ಎ.28 : ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ
ಮೇ.5 : ಕಲ್ಲುರ್ಟಿ ದೈವಕ್ಕೆ ಅಗಲು ಸೇವೆ
ಪುತ್ತೂರು ಶ್ರೀ ಮಹಾಲಕ್ಷ್ಮಿ ದೇವ ಸ್ಥಾನ ಶ್ರೀ ಲಕ್ಷ್ಮಿ ದೇವಿ ಬೆಟ್ಟದಲ್ಲಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರ ವರ್ಷಾವಧಿ ಉತ್ಸವವು ಎ.26 ರಂದು ನಡೆಯಲಿದೆ.
ಏ. 26 ರಂದು ಬೆಳಿಗ್ಗೆ ಗಣಪತಿ ಹೋಮ, ಮಹಾಪೂಜೆ, ನಂತರ ಪಾಷಾಣಮೂರ್ತಿಗೆ ತಂಬಿಲ, ನಾಗದೇ ವರಿಗೆ ತಂಬಿಲ, ಗುಳಿಗನಿಗೆ ತಂಬಿಲ ನಡೆಯಲಿದೆ.
1೦ ಗಂಟೆಯಿಂದ 11 ಗಂಟೆ ಯವರೆಗೆ ಶ್ರೀ ಶನೀಶ್ವರ ಭಜನಾ ಮಂಡಳಿ ಬನ್ನೂರು ಪುತ್ತೂರು ಇವರಿಂದ ಕುಣಿತ ಭಜನೆ, 11 ಗಂಟೆಯಿಂದ 12 ಗಂಟೆಯವರೆಗೆ ಮೂಡಯೂರು ಚಂದ್ರಶೇಖರ ಮತ್ತು ಬಳಗದವರಿಂದ ಸ್ಯಾಕ್ಸ್ ಫೋನ್ ವಾದನ, ಮಧ್ಯಾಹ್ನ 12:3೦ಕ್ಕೆ ಮಹಾಪೂಜೆ ದೇವಿ ದರ್ಶನ ಮತ್ತು ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4 ರಿಂದ 6 ಗಂಟೆಯವರೆಗೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6.3೦ಕ್ಕೆ ಮಸ್ಕಿರಿ ಕುಡ್ಲ ದೀಪಕ್ ಪಾಣಾಜೆ ಇವರಿಂದ ತೆಲಿಕೆ ಬಂಜಿನಿಲಿಕೆ, ರಾತ್ರಿ ೮:೩೦ರಿಂದ ಮಹಾಪೂಜೆ ದೇವಿ ದರ್ಶನ ಮತ್ತು ಪ್ರಸಾದ ವಿತರಣೆ, 9:3೦ ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಮೇಳದವರಿಂದ ತುಳು ಯಕ್ಷಗಾನ ಬಯಲಾಟ ನಾಡೂರ ನಾಗಬನ ನಡೆಯಲಿರುವುದು.
ಎ.28 ರಂದು ರಾತ್ರಿ ಕಲ್ಲುರ್ಟಿ, ಗುಳಿಗ ದೈವ ಗಳ ನೇಮೋತ್ಸವ, ಮೇ 5 ರಂದು ರಾತ್ರಿ ಕಲ್ಲುರ್ಟಿ ದೈವಕ್ಕೆ ಅಗಲು ಸೇವೆ ನಡೆಯಲಿರುವುದು ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.