ಗುತ್ತಿಗಾರು ಗ್ರಾಮದ ರಾಘವ ಗೌಡ ದಂಬೆಕೋಡಿ ಏ.22 ರ ಸಂಜೆ ಅಲ್ಪಾವಧಿಯ ಅಸೌಖ್ಯತೆಯಿಂದ ಕೆ.ವಿ.ಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಯಶೋದಾ, ಪುತ್ರ ಜೀವನ್ ದಂಬೆಕೋಡಿ, ಪುತ್ರಿಯರಾದ ಪ್ರೀತಿಕಾ ದಂಬೆಕೋಡಿ, ಜಶ್ಮಿತಾ ದಂಬೆಕೋಡಿ, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.