ಆಲೆಟ್ಟಿಯ ನಾರ್ಕೋಡು ಜಂಕ್ಷನ್ ನಲ್ಲಿದ್ದ ಬೃಹದಾಕಾರದ ಮರವೊಂದಕ್ಕೆ ನಿನ್ನೆ ಸಂಜೆ ಸಮಯದಲ್ಲಿ ಸಿಡಿಲು ಬಡಿದು ಮರಕ್ಕೆ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
ಸಂಜೆ ಸುರಿದ ಗಾಳಿ ಮಳೆಯ ಸಂದರ್ಭ ಬೆಂಕಿಯಉಂಡೆಯೊಂದು ಬಂದು ಮರಕ್ಕೆ ಬಡಿಯಿತು. ಮರದ ಬುಡದಿಂದ ಮೇಲ್ಭಾಗದವರೆಗೆ ಮರ ಸಿಗಿದುಕೊಂಡು ಹೋಗಿದೆ. ಮರದ ತುಂಡು ಹುಡಿ ಹುಡಿಯಾಗಿ ಹಾರಿ ಹೋಗಿದೆ.
ಈ ವೇಳೆಯಲ್ಲಿ ಭಾರಿ ದೊಡ್ಡ ಶಬ್ಧವು ಉಂಟಾಯಿತು.
ಜನಸಂಚಾರ ಇಲ್ಲದಿದ್ದು ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಲ್ಲೇ ಪಕ್ಕದ ಮನೆಯವರ ಟಿ.ವಿ, ಫ್ಯಾನ್ ಹಾಗೂ ಇಲೆಕ್ಟ್ರಿಕಲ್ ಸಾಮಾಗ್ರಿಗಳು ಹಾನಿಗೀಡಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಅಪ್ಪಕುಂಞ ನಾರ್ಕೋಡು ಸುದ್ದಿಗೆ ತಿಳಿಸಿದರು.