ರವೀಂದ್ರ ನಡ್ಕ ನಿಧನ

0

ಕಲ್ಮಡ್ಕ ಗ್ರಾಮದ ಪ್ರಗತಿಪರ ಕೃಷಿಕ, ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ನಡ್ಕ ರವೀಂದ್ರ ರವರು ಅಲ್ಪ ಕಾಲದ ಅಸೌಖ್ಯದಿಂದ ಏ.29 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 69 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಪದ್ಮಾವತಿ, ಪುತ್ರ ಜಯರಾಜ್, ಪುತ್ರಿಯರಾದ ಶ್ರೀಮತಿ ಚಂಚಲ, ಶ್ರೀಮತಿ ಚಂದ್ರಿಕಾ, ಸೊಸೆ, ಅಳಿಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.