ಮೇ.3: ಆಲೆಟ್ಟಿಯ ಪತ್ತುಕುಂಜದಲ್ಲಿ ಬೃಂದಾ’ಸ್ ನ್ಯಾಚುರಲ್ ಸೋಪ್ ಮತ್ತು ಕಾಸ್ಮೆಟಿಕ್ ಉತ್ಪನ್ನಗಳ ತಯಾರಿಕಾ ಘಟಕ ಶುಭಾರಂಭ

0

ಆಲೆಟ್ಟಿ ಗ್ರಾಮದ ಪತ್ತುಕುಂಜದಲ್ಲಿ ಶ್ರೀಮತಿ ರಶ್ಮಿ ಗಣೇಶ್ ರವರ ಮಾಲಕತ್ವದ ಬೃಂದಾ’ಸ್ ನ್ಯಾಚುರಲ್ ಸೋಪ್ ಮತ್ತು ಕಾಸ್ಮೆಟಿಕ್ ನೂತನ ತಯಾರಿಕಾ ಘಟಕವು ಮೇ.3 ರಂದು ಉದ್ಘಾಟನೆ ಗೊಳ್ಳಲಿರುವುದು.

ಸಾಮಾಜಿಕ ಧುರೀಣರು ಹಾಗೂ ನ್ಯಾಯವಾದಿಗಳಾದ ರಮೇಶ್ ರಾವ್ ಪತ್ತುಕುಂಜ ರವರ ಪುತ್ರಿ ಶ್ರೀಮತಿ ರಶ್ಮಿ ಮತ್ತು ಅಳಿಯ ಗಣೇಶ್ ರವರು ಗ್ರಾಮೀಣ ಪ್ರದೇಶಗಳಲ್ಲಿ ಪ್ರಕೃತಿಯ ಮಡಿಲಿನಲ್ಲಿ‌ ದೊರಕುವ ನೈಸರ್ಗಿಕ ವಸ್ತುಗಳನ್ನು ಬಳಸಿ ಆರೋಗ್ಯಭರಿತ ಸಾವಯವ ಉತ್ಪನ್ನಗಳಾದ ಬೃಂದಾ’ಸ್ ಸೋಪ್ ಹಾಗೂ ಕಾಸ್ಮೆಟಿಕ್ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ದೊಡ್ಡ ಮಟ್ಟದ ಸಾಧನೆಯ ಹಾದಿಗೆ ಮುಂದಡಿ ಇಟ್ಟಿರುತ್ತಾರೆ.

ಬೃಂದಾ’ಸ್ ನ್ಯಾಚುರಲ್ ಘಟಕವನ್ನು
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ರವರು ಉದ್ಘಾಟಿಸಲಿರುವರು. ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುಂದರ ನಾಯ್ಕ್ ಐ.ಎಫ್.ಎಸ್ , ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಕೆ.ವಿ.ಜಿ.ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ ದೀಪ ಪ್ರಜ್ವಲಿಸಲಿರುವರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅಭ್ಯಾಗತರಾಗಿ
ಹಿರಿಯ ಆಯುರ್ವೇದ ತಜ್ಞ ಡಾ. ಗಿರೀಶ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಶಾರದಾಂಬಾ ವಿದ್ಯಾ ಸಂಸ್ಥೆಯ ಮ್ಯಾನೇಜರ್ ಶ್ರೀಮತಿ ಶಾರದಾ ವೈ, ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ, ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯ ವ್ಯವಸ್ಥಾಪಕ ಅಶೋಕ್ ವಿಮನ್, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ತೇಜಕುಮಾರ್ ಬಡ್ಡಡ್ಕ, ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಆಲೆಟ್ಟಿ ಪಂಚಾಯತ್ ಸದಸ್ಯರಾದ ಸತ್ಯಕುಮಾರ್ ಆಡಿಂಜ, ಶ್ರೀಮತಿ ಶಶಿಕಲಾ ದೋಣಿ ಮೂಲೆ, ಶ್ರೀಮತಿ ಭಾಗೀರಥಿ ಪತ್ತುಕುಂಜ ರವರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿರುವುದಾಗಿ ರಮೇಶ್ ರಾವ್ ಪತ್ತುಕುಂಜ ರವರು ತಿಳಿಸಿದರು.