ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಹದಿಹರೆಯದ ಯುವಕರು

0

ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಹದಿಹರೆಯದ ಯುವಕರು ಮಾದಕ ವ್ಯಸನಿಗಳಾಗಿರುತ್ತಿದ್ದು, ಸುಳ್ಯ ತಾಲೂಕು ಕೂಡಾ ಇದರಿಂದ ಹೊರತಾಗಿಲ್ಲ. ಸಂಪಾಜೆ, ಅರಂತೋಡು, ಕೊಡಗಿನ ಚೆಂಬು , ಪೆರಾಜೆ, ಕೊಡಗು ಸಂಪಾಜೆ ಪರಿಸರದಲ್ಲಿ 16ರಿಂದ 25 ವರ್ಷ ವಯಸ್ಸಿನ ಯುವಕರ ಪೈಕಿ ಕೆಲವರು ಮಾದಕ ವ್ಯಸನಿಗಳಾಗುತ್ತಿದ್ದು, ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಇದರತ್ತ ಗಮನಹರಿಸಬೇಕಾಗಿದೆ.

ಅರಂತೋಡು, ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ, ಕೊಡಗಿನ ಚೆಂಬು , ಪೆರಾಜೆ ಹಾಗೂ ಸಂಪಾಜೆ ಭಾಗದಲ್ಲಿ ಹೆಚ್ಚಾಗಿ ಯುವಕರು ಈ ದುಷ್ಟಟಕ್ಕೆ ಬಲಿಯಾಗುತ್ತಿದ್ದು, ಈ ಹದಿಹರೆಯದ ಯುವಕರಿಗೆ ಗಾಂಜಾವನ್ನು ಸರಬರಾಜು ಮಾಡುತ್ತಿರುವವರು ಯಾರು ಮತ್ತು ಹೇಗೆ? ಗಾಂಜಾ ಸ್ಥಳೀಯವಾಗಿ ಯುವಕರ ಕೈಗೆ ದೊರಕುತ್ತದೆಯೇ, ಅಥವಾ ಇದಕ್ಕೆಂದೇ, ಫೆಡ್ಲರ್ ಗಳು ಇದ್ದಾರೆಯೇ, ಎಂಬುದು ಯಕ್ಷಪ್ರಶ್ನೆಯಾಗಿದ್ದು, ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ಈ ಪರಿಸರದಲ್ಲಿ ಬಹಳಷ್ಟು ಹದಿಹರೆಯದ ಯುವಕರು ಮಾದಕ ವಸ್ತು ಸೇವೆಗೆ ಬಲಿಯಾಗಿದ್ದು, ಈ ಬಗ್ಗೆ ಸ್ಥಳೀಯವಾಗಿ ಶಾಲಾ – ಕಾಲೇಜುಗಳಲ್ಲಿ , ಗ್ರಾಮಮಟ್ಟದಲ್ಲಿ ವಿವಿಧ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮ ಹಾಗೂ ಗಾಂಜಾ ಮುಕ್ತ ಅಭಿಯಾನ ನಡೆಸಿ, ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ.