ಮರ್ಕಂಜ : ಜಾತ್ರೋತ್ಸವ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಎ.11ರಿಂದ ಆರಂಭಗೊಂಡು ನಿನ್ನೆ ರಾತ್ರಿ ಶಿರಾಡಿ ಯಾನೆ ರಾಜನ್ ದೈವದ ನೇಮದೊಂದಿಗೆ ಸಂಪನ್ನಗೊಂಡಿತು.


ಜಾತ್ರೋತ್ಸವದ ಕೊನೆಯ ದಿನವಾದ ನಿನ್ನೆ ಬೆಳಿಗ್ಗೆ ಕಾವೂರು ದೇವಳದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು, ಮಂತ್ರಾಕ್ಷತೆ ನಡೆಯಿತು.


ರಾತ್ರಿ ತೋಟಚಾವಡಿ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಶಿರಾಡಿ ಯಾನೆ ರಾಜನ್ ದೈವದ ನೇಮ ನಡೆಯಿತು.


ಜಾತ್ರೋತ್ಸವ ಪ್ರಯುಕ್ತ ರವಿರಾಮ ರೈ ಮಿತ್ತೂರು ರವರ ನೇತೃತ್ವದಲ್ಲಿ ಊರ ಕಲಾವಿದರಿಂದ ಶ್ರೀಕೃಷ್ಣ ರಾಯಭಾರ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ದಾಮೋದರ ಪಾಟಾಳಿ ಮಿತ್ತಡ್ಕ, ಶ್ಯಾಮ್‌ಪ್ರಸಾದ್ ಗುಂಡಿ, ಬಾಲಕೃಷ್ಣ ಬೊಮ್ಮಾರ್, ಹಾಗೂ ಮುಮ್ಮೇಳದಲ್ಲಿ ರವಿರಾಮ ರೈ ಮಿತ್ತುರು, ನಾರಾಯಣ ಗೌಡ ಪಾನತ್ತಿಲ, ಜಯಪ್ರಕಾಶ್ ಗುಂಡಿ ಮತ್ತು ಶ್ರೀನಿವಾಸ್ ರಾವ್ ದೇಶಕೋಡಿ ಭಾಗವಹಿಸಿದ್ದರು.