ಪ್ರೇಮಾನಂದ ನಾಯಕ್ ಮೆಟ್ಟಿನಡ್ಕ ನಿಧನ

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ನಿವಾಸಿ, ಪ್ರೇಮಾನಂದ ನಾಯಕ್ ಹೃದಯಾಘಾತದಿಂದ ಇಂದು ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು.


ನಿನ್ನೆ ರಾತ್ರಿಯಿಂದ ಅವರಿಗೆ ಜ್ವರ ಬರುತ್ತಿತ್ತೆನ್ನಲಾಗಿದೆ. ಇಂದು ಅಸೌಖ್ಯ ಹೆಚ್ಚಾದುದರಿಂದ ಮುಂಜಾನೆ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿ ಬೆಳಿಗ್ಗೆ 10.30 ರ ಸುಮಾರಿಗೆ ಕೊನೆಯುಸಿರೆಳೆದರೆನ್ನಲಾಗಿದೆ.

ಮೃತರು ಪತ್ನಿ ಸಾಮಾಜಿಕ ಧುರೀಣೆ ಶ್ರೀಮತಿ ಜ್ಯೋತಿ ಪ್ರೇಮಾನಂದ, ಪುತ್ರ, ಪುತ್ರಿ, ಸೊಸೆ, ಸಹೋದರ, ರಮಾನಂದ ನಾಯಕ್ ಮೆಟ್ಟಿನಡ್ಕ, ಸಹೋದರಿ ಶ್ರೀಮತಿ ಪುಷ್ಪಲತಾ , ಮತ್ತು ಇತರ ಬಂಧುಗಳನ್ನು ಅಗಲಿದ್ದಾರೆ.