ಖುಷಿ ಬ್ಯೂಟಿ ಪಾರ್ಲರ್ & ಟೈಲರಿಂಗ್ ಶಾಪ್ ವತಿಯಿಂದ 19 ಟೈಲರಿಂಗ್ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಸುಳ್ಯ ತಾಲ್ಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಷೆಡ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಖುಷಿ ಬ್ಯೂಟಿ ಪಾರ್ಲರ್ & ಟೈಲರಿಂಗ್ ಶಾಪ್ ವತಿಯಿಂದ ಪ್ರಪ್ರಥಮವಾಗಿ 19 ಟೈಲರಿಂಗ್ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮೇ.2 ರಂದು ನಡೆಯಿತು.
ಈ ಮೊದಲು ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುಸುಮಾ ಕೇಶವ ಬಂಗ್ಲೆ ಗುಡ್ಡೆ ತಾನು ಸಮಾಜದಲ್ಲಿ ಸ್ವ ಉದ್ಯೋಗದ ಬದುಕನ್ನು ಕಂಡುಕೊಳ್ಳುವ ಮೂಲಕ ಇತರ ಮಹಿಳೆಯರಿಗೂ ಸ್ವ ಉದ್ಯೋಗವನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಯನ್.ಇಂದಿರಾ ದೇವಿ ಪ್ರಸಾದ್ ಸಂಪಾಜೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಸಂಪಾಜೆ ಗ್ರಾಂ.ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿ ವೇಲ್ , ಹಿರಿಯ ಟೈಲರ್ ಪೂರ್ಣಿಮಾ ಟೆಕ್ಸ್ ಟೇಲ್ಸ್ ಮಾಲೀಕ ಬಿ. ಆರ್.ಪದ್ಮಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಂಸ್ಥೆಯು ಉನ್ನತಿ ಸ್ಥಾನಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಬಳಿಕ ಟೈಲರಿಂಗ್ ಪೂರೈಸಿದ 19 ವಿದ್ಯಾರ್ಥಿಗಳಾದ ಕುಸುಮಾ ಜಾನ್ ಸೆನ್, ಸೌಮ್ಯ ಸತ್ಯಜಿತ್,ವನಿತಾ , ಶಿಲ್ಪಾ ಜೋಡುಪಾಲ,ಶಬ್ನಮ್ ಕೊಯನಾಡು,ಉಷಾ ಪದ್ಮನಾಭ,ಗೀತಾ , ಪ್ರೀತಿಕಾ ಚಡಾವು, ಸಿಂಚನಾ, ರಕ್ಷಿತಾ, ಶೋಭಾವತಿ,ಜ್ಯೋತಿಕಾ, ಶಂನಾಸ್,ಅನು ಕೊಯನಾಡು,ಮಂಜುಳಾ ಕೆದಂಬಾಡಿ, ರೂಪಾ, ವನಿತಾ ಪಿ. ಡಿ ,ಹಸೀನಾ ಇವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಬಳಿಕ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿದರು. ಈ ವೇಳೆ ಸಂಸ್ಥೆಯ ಮಾಲೀಕರಾದ ಕುಸುಮಾ ಕೇಶವ ಪೆರಣ ಬಂಗ್ಲೆಗುಡ್ಡೆ ಕಲ್ಲುಗುಂಡಿ ,ಕೇಶವ ಪೆರಣ ಬಂಗ್ಲೆ ಗುಡ್ಡೆ ಕಲ್ಲುಗುಂಡಿ, ತಾವು ನಡೆದು ಬಂದ ಜೀವನದ ಕಷ್ಟ – ಸುಖ , ಹಾಗೂ ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಎಡವದೆ ತಮ್ಮ ಕೆಲಸವನ್ನು ಪ್ರೀತಿಸಿ, ಪ್ರೋತ್ಸಾಹಿಸಿ , ಇತರರಿಗೂ ಪ್ರೇರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಥೆಗೆ ನೆನಪಿನ ಕೊಡುಗೆಯನ್ನು ನೀಡಲಾಯಿತು.
ಕು.ಖುಷಿ ಪ್ರಾರ್ಥನೆ ಮಾಡಿ, ಫಾತಿಮತ್ ಝೌರಾ ಸ್ವಾಗತಿಸಿ , ಪ್ರೀತಿಕಾ ಚಡಾವು ಕಾರ್ಯಕ್ರಮ ನಿರೂಪಿಸಿ, ಸಂಸ್ಥೆ ಮಾಲಕರಾದ ಕುಸುಮಾ ಕೇಶವ ಬಂಗ್ಲೆಗುಡ್ಡೆ
ವಂದಿಸಿದರು.