ಸಂಪಾಜೆ, ಕಲ್ಲುಗುಂಡಿ, ಕೊಯನಾಡು ಭಾಗಗಳಲ್ಲಿ ನಿನ್ನೆ (ಮೇ 3 ರಂದು)ಸುರಿದ ಧಾರ ಕಾರ ಮಳೆ – ಗಾಳಿಗೆ , ಮರ ಬಿದ್ದು ಕರೆಂಟ್ ಕಂಬಗಳು ಕಟ್ ಆಗಿ ರಸ್ತೆಗೆ ಬಿದ್ದಿದೆ . ಈ ಹಿನ್ನಲೆ ವಿದ್ಯುತ್ ವ್ಯತ್ಯಯಗೊಂಡಿದೆ.
ಸಂಪಾಜೆಯ ಗಡಿಕಲ್ಲು, ಸ್ಮಶಾನ ಹತ್ತಿರ ಮುರಿದು ಬೀಳುವ ಸ್ಥಿತಿಯಲ್ಲಿ ಇದ್ದ ಕರೆಂಟ್ ಕಂಬ ಮುರಿದು ಬಿದ್ದು ವಯರಲ್ಲಿ ನೇತಾಡಿಕೊಂಡಿದೆ. ಹಾಗೂ ಕಲ್ಲುಗುಂಡಿ ಭಾಗದಲ್ಲಿ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.