ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂಪನ್ನ

0

ವೈಭವದಿಂದ ಜರುಗಿದ ಮಹಾವಿಷ್ಣುಮೂರ್ತಿ ದೈವದ ನಡಾವಳಿ

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನಿವಾರ ನಡೆದ ವೈಭವದ ಮಹಾವಿಷ್ಣುಮೂರ್ತಿ ದೈವದ ನಡಾವಳಿಯೊಂದಿಗೆ ಮೂರು ದಿನಗಳ ಜಾತ್ರೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ಜಾತ್ರೋತ್ಸವದ ಕೊನೆಯ ದಿನವಾದ ಶನಿವಾರ ದೇಗುಲದ ಬಡಗು ದಿಕ್ಕಿನಲ್ಲಿರುವ ವಿಷ್ಣುಮೂರ್ತಿ ದೈವದ ಕಟ್ಟೆಯ ಸನಿಹ ಶ್ರೀ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯಿತು. ಈ ವೇಳೆ ಅಸಂಖ್ಯಾತ ಭಕ್ತಾದಿಗಳು ಹಾಜರಿದ್ದು ದೈವದ ಪ್ರಸಾದ ಸ್ವೀಕರಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು‌.

ಇಪ್ಪತ್ತಾರು ವರ್ಷಗಳ ಬಳಿಕ ದೇಗುಲದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆದಿದ್ದು ಆ ಬಳಿಕ ಮೂರು ದಿನಗಳ ಹಿಂದೆ ವಾರ್ಷಿಕ ಜಾತ್ರೋತ್ಸವ ಆರಂಭಗೊಂಡಿತ್ತು. ಶುಕ್ರವಾರ ಉಳ್ಳಾಕುಲು ನೇಮೋತ್ಸವದ ವೇಳೆ ಇತಿಹಾಸ ಪ್ರಸಿದ್ಧ ‘ಅಡ್ಡಣಪೆಟ್ಟು’ ಸೇವೆಯೂ ನಡೆದಿತ್ತು. ಶನಿವಾರ ವೈಭವದ ವಿಷ್ಣುಮೂರ್ತಿ ದೈವದ ನಡಾವಳಿ ನಡೆಯುವುದರೊಂದಿಗೆ ಕಳೆದ ಇಪ್ಪತ್ತು ದಿನಗಳಿಂದ ದೇಗುಲದಲ್ಲಿ ನಡೆಯುತ್ತಿದ್ದ ವಿವಿಧ ಧಾರ್ಮಿಕ, ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂತಿಮ ತೆರೆ ಎಳೆದಂತಾಗಿದೆ.