ಅರಂತೋಡು ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಶಾರದಾ ನಿವೃತ್ತಿ

0

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಶಾರದಾ ಅವರು ತಮ್ಮ ಸುದೀರ್ಘ 29 ವರ್ಷಗಳ ಶಿಕ್ಷಕ ವೃತ್ತಿಜೀವನದಿಂದ ಎ.30ರಂದು ನಿವೃತ್ತಿಗೊಂಡರು.

ಮೂಲತಃ ಜಾಲ್ಸೂರು ಗ್ರಾಮದ ಕಡಿಕಡ್ಕದವರಾಗಿರುವ ಶ್ರೀಮತಿ ಶಾರದಾ ಅವರು ದ.ಕ. ಸಂಪಾಜೆ ಗ್ರಾಮದ ಬಾಚಿಗದ್ದೆ ನಿವಾಸಿ ಬಿ.ಎಸ್.ಎನ್.ಎಲ್. ಉದ್ಯೋಗಿ ಬಾಲಚಂದ್ರ ಅವರ ಪತ್ನಿ.

ಶ್ರೀಮತಿ ಶಾರದಾ ಅವರು ಬೆಳ್ಳಾರೆಯ ಕೊಡಿಯಾಲ ಶಾಲೆ, ಆರಂತೋಡಿನ ಬಿಳಿಯರು ಶಾಲೆ, ಆರಂತೋಡಿನ ಸ.ಹಿ.ಪ್ರಾ.ಶಾಲೆ ಸೇರಿದಂತೆ ಒಟ್ಟು 29 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದರು.
ಇವರ ಪುತ್ರ ರಕ್ಷಿತ್, ಸೊಸೆ ರಮ್ಯಾ ಪುತ್ರಿ ಶ್ರುತಿ ಅಳಿಯ ಪ್ರತೀಕ್ ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ.