ಐದು ನಿರ್ಣಯ ಕೈಗೊಂಡ ರೈತರು
ಸುಳ್ಯದಲ್ಲಿ ಕೋವಿ ಪರವಾನಗಿ ರೈತ ಸದಸ್ಯರ ಸಭೆಯು ಮೇ.6ರಂದು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ ಕೋವಿ ಪರವಾನಗಿದಾರರಿಂದ ಅಭಿಪ್ರಾಯ ಸಂಗ್ರಹವಾದ ಬಳಿಕ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮುಂದೆ ನಡೆಯುವ ಯಾವುದೇ ಚುನಾವಣಾ ಸಂದರ್ಭಗಳಲ್ಲಿ ಬೆಳೆ ಸಂರಕ್ಷಣೆಗಾಗಿ ಪರವಾನಿಗೆ ಹೊಂದಿದ ಕೃಷಿಕರ ಬಂದೂಕುಗಳನ್ನು ಠೇವಣಿ ಇರಿಸುವುದರಿಂದ ವಿನಾಯತಿಗಾಗಿ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು. ಮುಂದುವರಿಸುವುದು 2. ಕೋವಿ ಪರವಾನಿಗೆಯನ್ನು ನವೀಕರಣ ಸಮಯದಲ್ಲಿ ಮಾತ್ರ ಪೋಲೀಸ್ ಠಾಣೆಗೆ ಹಾಜರು ಪಡಿಸುವುದೆಂದು ಸಂಬಂದ ಪಟ್ಟವರನ್ನು ಒತ್ತಾಯಿಸುವುದು 3. ವರ್ಷ ವರ್ಷವೂ ನೀಡಲಿರುವ ಬಂದೂಕುಗಳ ಹಾಗೂ ಪರವಾನಿಗೆಯ ತಪಾಸಣೆಯನ್ನು ಆಯಾ ಗ್ರಾಮಗಳಲ್ಲಿ ಪೋಲೀಸರು ಮಾಡಲು ವ್ಯವಸ್ತೆ ಕಲ್ಪಿಸುವುದು. 4. ಬಂದೂಕು ಪರವಾನಿಗೆದಾರರು ಮೃತರಾದ ಸಂದರ್ಭಗಳಲ್ಲಿ ಪರವಾನಿಗೆಯನ್ನು ವಾರೀಸುದಾರರಿಗೆ ವರ್ಗಾಯಿಸುವ ವ್ಯವಸ್ಥೆಯನ್ನು ಈ ಹಿಂದಿನಂತೆ ಸರಳೀಕರಣ ಗೊಳಿಸಬೇಕು 5. ಪ್ರತೀ ಗ್ರಾಮಗಳಲ್ಲಿರುವ ಬಂದೂಕು ಪರವಾನಿಗೆ ಹೊಂದಿರುವ ಪ್ರತಿಯೊಬ್ಬ ಕೃಷಿಕರನ್ನು ಸಂಪರ್ಕಿಸಿ ಗುಂಪಿಗೆ ಸೇರಿಸಿಕೊಳ್ಳುವುದು , ಈಗಾಗಲೆ ಈ ಗುಂಪಿನ ಮುಖೇನ ನಡೆದ ಪ್ರಯತ್ನವಾಗಿ , ದಾವೆ ಹೂಡಿದವರಿಗೆ ತಕ್ಷಣ ಹಾಗೂ ಉಳಿದ ಕೃಷಿಕರಿಗೆ ಚುನಾವಣೆ ಮುಗಿದ ಕೂಡಲೆ ಬಂದೂಕು ಹಿಂಪಡೆಯಲು ಸಾದ್ಯವಾದುದನ್ನು ಮನವರಿಕೆ ಮಾಡುವುದು .ಎಂಬುದಾಗಿ ತೀರ್ಮಾನಿಸಲಾಯಿತು .
ಈ ಸಭೆಯಲ್ಲಿ ಸಭೆಯ ನೇತೃತ್ವ ವಹಿಸಿದ್ದ ವಕೀಲರಾದ ಯಂ ವೆಂಕಪ್ಪ ಗೌಡ , ಪಿ.ಎಸ್. ಗಂಗಾಧರ , ವಿಶ್ವನಾಥ ರಾವ್ , ಶಂಭಯ್ಯ ಪಾರೆ ,ಜಗದೀಶ ಕುಯಿಂತೋಡು , ವಕೀಲರಾದ ಪ್ರದೀಪ ಕೊಲ್ಲಮೊಗ್ರ , ದಾಮೋದರ ನಾರ್ಕೋಡು , ಅಶೋಕ್ ಚೂಂತಾರ್ , ಮಾಧವ ಗೌಡ ಮಡಪ್ಪಾಡಿ, ಬಾಲಗೋಪಾಲ ಸೇರ್ಕಜೆ, ದಿವಾಕರ ಪೈ ಮಜಿಗುಂಡಿ ಮತ್ತಿತರ ಕೋವಿ ಪರವಾನಿಗೆದಾರರು ಹಾಜರಿದ್ದರು.