ಸುಳ್ಯ ನಗರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ – ಬೂಡು ಪರಿಸರದಲ್ಲಿ ಕೃಷಿ ನಾಶ

0

ಸುಳ್ಯ ನಗರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಕಳೆದ ರಾತ್ರಿ ವೇಳೆಯಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.


ನಾಗಪಟ್ಟಣ ಪಯಸ್ವಿನಿ ನದಿಗೆ ನಿರ್ಮಿಸಲಾದ ಅಣೆ ಕಟ್ಟಿನ ಬಳಿ ಕಂಡು ಬಂದ ಕಾಡಾನೆಗಳ ಹಿಂಡು ತಡರಾತ್ರಿ ಸಮಯದಲ್ಲಿ ಬೂಡು ರಾಧಾಕೃಷ್ಣ ರೈ ಯವರ ತೋಟಕ್ಕೆ ನುಗ್ಗಿ ಸುಮಾರು 200 ಕ್ಕೂ ಹೆಚ್ಚು ಬಾಳೆಗಿಡಗಳನ್ನು ಮತ್ತು ತೆಂಗು ಕಂಗಿನ ಮರಗಳನ್ನು ಧ್ವಂಸ ಮಾಡಿ ಕೃಷಿಗೆ ಹಾನಿ ಮಾಡಿದೆ. ಅಲ್ಲಿಂದ ರಾಮಕೃಷ್ಣ ಮಡಿವಾಳರ ತೋಟಕ್ಕೆ ನುಗ್ಗಿದೆ. ಕೆರೆಮೂಲೆ ಲೋಕೇಶ್ ರವರ ತೋಟಕ್ಕೆ ಧಾಳಿ ನಡೆಸಿವೆ. ಇದರಿಂದಾಗಿ ಅಪಾರ ಪ್ರಮಾಣದಲ್ಲಿ
ಕೃಷಿಕರು ನಷ್ಟ ಅನುಭವಿಸುವಂತಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರವಾಗಿ ದಾಂಧಲೆ ನಡೆಸುತ್ತಿರುವ ಆನೆಗಳು ಇದೀಗ ನಗರ ಪ್ರದೇಶಕ್ಕೆ ಬಂದಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡಾನೆಗಳ ಉಪಟಳವು ಕೃಷಿಕರ ನಿದ್ದೆಗೆಡಿಸಿದೆ.