ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವದ ಪೂರ್ವಭಾವಿ ಸಭೆ

0

ಶಾಶ್ವತ ಚಪ್ಪರ ನಿರ್ಮಾಣಕ್ಕೆ ಭಜನಾ ಸಂಘದಿಂದ ರೂ.1 ಲಕ್ಷ ದೇಣಿಗೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವವು ಜೂ.5 ರಂದು ನಡೆಯಲಿದ್ದು ಪೂರ್ವ ಭಾವಿ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರ ಅಧ್ಯಕ್ಷತೆಯಲ್ಲಿ ಮೇ.11 ರಂದು ದೇವಳದಲ್ಲಿ ‌ನಡೆಯಿತು.


ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಅಂತಿಮ ಹಂತದ ಕೆಲಸ ಕಾರ್ಯವು ನಡೆಯುತ್ತಿದ್ದು ಶಿಲ್ಪಿ ಜಯಕರ ಆಚಾರ್ಯ ರವರ ನೇತೃತ್ವದಲ್ಲಿ ಮರದ ಕೆಲಸಗಳು ಮುಕ್ತಾಯ‌ದ ಹಂತದಲ್ಲಿದೆ. ಗಾರೆ ಕೆಲಸ ಮತ್ತು ಕಂಪೌಂಡು ರಚನೆ,ಬಾವಿ ನಿರ್ಮಾಣ ಕಾರ್ಯವನ್ನು ಮಾಡಬೇಕಾಗಿದೆ.
ಈ ಎಲ್ಲಾ ‌ಕೆಲಸಗಳು‌ ಗ್ರಾಮಸ್ಥರ ದೇಣಿಗೆಯ ಮೂಲಕ ನಡೆಯಬೇಕಾಗಿದ್ದು ಮನೆ ಮನೆಗೆ ತೆರಳಿ ಧನಸಹಾಯ ಸಂಗ್ರಹ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.
ದೇವಸ್ಥಾನದ ರಾಜಾಂಗಣ ಪೂರ್ವ ಭಾಗದ ಶಾಶ್ವತ ಚಪ್ಪರದ ನಿರ್ಮಾಣ ಕಾರ್ಯವು ಆರಂಭಗೊಂಡಿದ್ದು ಈ ಭಾಗದ ಚಪ್ಪರ ಹಾಕುವ ಜವಬ್ದಾರಿ ಇರುವ ಮನೆಗಳಿಂದ ದೇಣಿಗೆ ಸಂಗ್ರಹಿಸುವುದಾಗಿ ತೀರ್ಮಾನಿಸಲಾಯಿತು. ಬಾಕಿ ಉಳಿದ ಮೂರು ಭಾಗದಲ್ಲಿಯೂ ಶಾಶ್ವತ ಚಪ್ಪರ ನಿರ್ಮಿಸುವ ಬಗ್ಗೆ ತೀರ್ಮಾನಿಸಿದ್ದು ಆಯಾಯ ಪ್ರದೇಶಗಳ ಜವಬ್ದಾರಿ ನಿರ್ವಹಣೆಗೆ ಚಪ್ಪರ ಸಮಿತಿಯನ್ನು ನಿರ್ಮಿಸಲಾಯಿತು. ಕೋಲ್ಚಾರು, ಕುಡೆಂಬಿ, ಕಣಕ್ಕೂರು, ಕುಂಭಕೋಡು ಭಾಗದ ಸಮಿತಿ ಅಧ್ಯಕ್ಷ ಹರೀಶ್ ಕೊಯಿಂಗಾಜೆ, ಆಲೆಟ್ಟಿ, ಕುಡೆಕಲ್ಲು, ಗುಂಡ್ಯ, ಕುದ್ಕುಳಿ, ನಾರ್ಕೋಡು ಭಾಗಕ್ಕೆ ಹರಿಪ್ರಸಾದ್ ಗಬ್ಬಲ್ಕಜೆ, ಕುಂಚಡ್ಕ ,ಭೂತಕಲ್ಲು ,
ಬಾರ್ಪಣೆ,ಏಣಾವರ ಭಾಗಕ್ಕೆ ರಾಮಚಂದ್ರ ಬಾಳೆಹಿತ್ಲು, ಬಡ್ಡಡ್ಕ,ಕೂರ್ನಡ್ಕ,ರಂಗತ್ತಮಲೆ ಭಾಗಕ್ಕೆ ಪ್ರಸನ್ನ ಕೆ.ಸಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಜೂ.5 ರಂದು ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಪೂರ್ವ ಭಾಗದ ರಾಜಾಂಗಣ ಚಪ್ಪರದ ಉದ್ಘಾಟನಾ
ಸಮಾರಂಭವನ್ನು ಹಮ್ಮಿಕೊಳ್ಳುವುದಾಗಿ ಅಭಿಪ್ರಾಯ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಶಾಶ್ವತ ಚಪ್ಪರ ನಿರ್ಮಾಣಕ್ಕೆ ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ವತಿಯಿಂದ
ರೂ.1 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಚಪ್ಪರಕ್ಕೆ ಪ್ರಥಮ ಕಂತಿನ ಬಾಬ್ತು ಕುಡೆಕಲ್ಲು ಗಂಗಾಧರ ಗೌಡ ರವರು 10 ಸಾವಿರ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಹೇಮಚಂದ್ರ ಬೈಪಡಿತ್ತಾಯ, ಜೀ.ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ವ್ಯ.ಸ.ಸದಸ್ಯರಾದ ಸತೀಶ್ ಕುಂಭಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ, ಮಮತ ನಾರ್ಕೋಡು, ಸೊಸೈಟಿ ಉಪಾಧ್ಯಕ್ಷ
ಸುಧಾಕರ ಆಲೆಟ್ಟಿ, ಸೊಸೈಟಿ ಮಾಜಿ ಅಧ್ಯಕ್ಷ ಯತಿರಾಜ್ ಭೂತಕಲ್ಲು, ನಿವೃತ್ತ ಪೋಲಿಸ್ ಅಧಿಕಾರಿ ಗಂಗಾಧರ ಗೌಡ ಕುಡೆಕಲ್ಲು, ರಾಮಚಂದ್ರ ಬಾಳೆಹಿತ್ಲು, ಸದಾಶಿವ ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ,ಸದಸ್ಯ ನವೀನ್ ಕುಮಾರ್ ಆಲೆಟ್ಟಿ, ಪವಿತ್ರನ್ ಗುಂಡ್ಯ ಉಪಸ್ಥಿತರಿದ್ದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಸ್ವಾಗತಿಸಿ,ವಂದಿಸಿದರು.