ಕಲ್ಲುಗುಂಡಿಯ ಮುಖ್ಯರಸ್ತೆಯಲ್ಲಿರುವ ರಫೀಕ್‌ರವರ ಕರಾವಳಿ ಹೋಟೆಲ್‌ನಲ್ಲಿ ಕಳ್ಳತನವಾದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಹೋಟೆಲ್‌ನ ಶಟರ್‌ನ್ನು ಮುರಿದು ಡ್ರಾಯರ್‌ನಲ್ಲಿದ್ದ ೪೫೦೦ ರೂ. ನಗದು ಹಾಗೂ ಕಲ್ಲುಗುಂಡಿ ಮಸೀದಿಗೆ ತೆಗೆದಿರಿಸಿದ್ದ ಕಾಣಿಕೆ ಡಬ್ಬವನ್ನು ಮುರಿದು ಅದರಲ್ಲಿದ್ದ ಹಣವನ್ನೂ ಕಳವುಗೈಯ್ಯಲಾಗಿದೆ. ನಿನ್ನೆ ಭಾರೀ ಮಳೆ, ಗುಡುಗು ಮಿಂಚು ಇದ್ದ ಕಾರಣ ಹೋಟೆಲ್‌ನಲ್ಲಿದ್ದ ಸಿಸಿ ಕ್ಯಾಮರಾವನ್ನು ಆಫ್ ಮಾಡಿ ಇಡಲಾಗಿತ್ತು. ರಾತ್ರಿ ವೇಳೆ ಕಳ್ಳತನವಾಗಿದ್ದು, ಘಟನೆಯ ಬಗ್ಗೆ ಹೆಚ್ಚಿನ ವಿವರ ತಿಳಿದಿಲ್ಲ. ಪೊಲೀಸರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದರು.