ಸನ್ಮಾನ – ಪ್ರಧಾನ ಉಪನ್ಯಾಸ – ಯಕ್ಷಗಾನ ಬಯಲಾಟ
ಸತ್ಯ, ಅಹಿಂಸೆ, ನಿಸ್ವಾರ್ಥತೆಯನ್ನು ಪಾಲಿಸುತ್ತಿರುವವರು ಜೈನ ಧರ್ಮದವರು : ಶಾಸಕಿ ಭಾಗೀರಥಿ ಮುರುಳ್ಯ
ಸಾಮಾಜಿಕ ಕಳಕಳಿ ಹೊಂದಿರುವ ಜೈನ ಮನೆತನ ಬಲ್ನಾಡುಪೇಟಯವರು : ಭರತ್ ಮುಂಡೋಡಿ
ಬಲ್ನಾಡುಪೇಟೆಯ ಜೈನ ಕುಟುಂಬದ ಒಗ್ಗಟ್ಟು ಇಡೀ ಜೈನ ಕುಟುಂಬಕ್ಕೆ ಆದರ್ಶ. ಇದನ್ನು ಹೀಗೆ ಉಳಿಸಿಕೊಳ್ಳಬೇಕು : ಮುನಿರಾಜ ರೆಂಜಾಳ
ಮರ್ಕಂಜದ ಬಲ್ನಾಡುಪೇಟೆ 1008 ಶ್ರೀ ಆದೀಶ್ವರ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ ಹಾಗೂ ಪ್ರತಿಷ್ಠಾ ಮಹೋತ್ಸವದ 10ನೇ ವಾರ್ಷಿಕೋತ್ಸವ ದ ಪ್ರಯುಕ್ತ ಸಭಾ ಕಾರ್ಯಕ್ರಮ, ಪ್ರಧಾನ ಉಪನ್ಯಾಸ, ಸನ್ಮಾನ, ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಜೈನ ಪದವಿ ಪೂರ್ವ ಕಾಲೇಜು ಮೂಡಬಿದಿರೆಯ ಉಪನ್ಯಾಸಕ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಧಾರ್ಮಿಕ ಚಿಂತಕರಾದ ಮುನಿರಾಜ ರೆಂಜಾಳ ಪ್ರಧಾನ ಉಪನ್ಯಾಸ ನೀಡಿದರು.
ಪ್ರಧಾನ ಅತಿಥಿಗಳಾಗಿ ಸುಳ್ಯ ಶಾಸಕಿ ಕು| ಭಾಗೀರಥಿ ಮುರುಳ್ಯ, ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಆಗಮಿಸಿದ್ದರು. ವೇದಿಕೆಯಲ್ಲಿ ಆಡಳಿತ ಮೊಕ್ತೇಸರ ಬಿ.ಯುವರಾಜ ಜೈನ್, ಆಡಳಿತ ಮಂಡಳಿ ಅಧ್ಯಕ್ಷ ನಾಗಕುಮಾರ ಶೆಟ್ಟಿ, ಯುವರಾಜ್ ಜೈನ್ ರವರ ಪತ್ನಿ ಶ್ರೀಮತಿ ಪ್ರಸನ್ನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತಿರುಪತಿ ಮರ್ಕಂಜ, ಕೇಶವ ಪುರುಷ, ಮಂಜುನಾಥ ಪುರುಷರವರನ್ನು ಸನ್ಮಾನಿಸಲಾಯಿತು.
ಬಳಿಕ ಕೂಷ್ಮಾಂಡಿನಿ ಚರಿತ್ರೆ ಯಕ್ಷಗಾನ ಬಯಲಾಟ ನಡೆಯಿತು.