ಅರಂತೋಡು : ವಿಷ ಸೇವಿಸಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

0


ವ್ಯಕ್ತಿಯೊಬ್ಬರು ವಿಷ ಸೇವಿಸಿ ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅರಂತೋಡು ಬಾಜಿನಡ್ಕದಿಂದ ಮೇ ೧೨ ರಂದು ವರದಿಯಾಗಿದೆ.ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾತ್ರಿ ಸುಮಾರು ೮ ಗಂಟೆಗೆ ಅರಂತೋಡಿನ ಬಾಜಿನಡ್ಕದ ಕುಟ್ಯಪ್ಪ ಎಂಬವರು ವಿಷವನ್ನು ಮದ್ಯದೊಂದಿಗೆ ಸೇರಿಸಿ ಕುಡಿದು ಅಸ್ವಸ್ಥಗೊಂಡು ಬೊಬ್ಬೆ ಹಾಕಲು ಶುರು ಮಾಡಿದರು.

ಬೊಬ್ಬೆ ಕೇಳಿ ನೆರೆಕೆರೆಯಲ್ಲಿದ್ದ ಅವರ ಅಣ್ಣನವರು ಬಂದು ನೋಡಿದಾಗ ವಿಷ ಕುಡಿದ ವಿಷಯ ತಿಳಿಸಿದರು. ವಿಷ ಕುಡಿದ ಕುಟ್ಯಪ್ಪರು ಫೋನ್ ಮಾಡಿ ತಾನು ವಿಷ ಕುಡಿದ ವಿಷಯವನ್ನು ನೆರಕರೆಯವರಿಗೆ ತಿಳಿಸಿದರು. ನಂತರ ಅವರು ಅರಂತೋಡು ಸೊಸೈಟಿ ಆಂಬುಲೆನ್ಸ್‌ನಲ್ಲಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದರು. ಇದನ್ನು ಕಂಡು ಅವರು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಹೇಳಿದರು. ಇದೀಗ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.