ಚೊಕ್ಕಾಡಿ ಪ್ರೌಢಶಾಲೆಯ ಉದ್ಯೋಗಿ ವಿಶ್ವನಾಥ ಮುಗೇರ ಕೆ. ನಿಧನ

0

ಬೆಳ್ಳಾರೆಯ
ಮಣಿಕ್ಕಾರ ನಿವಾಸಿ ಅಮರಮುಡ್ನೂರು ಗ್ರಾಮದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಲ್ಲಿ ಉದ್ಯೋಗಿಯಾಗಿದ್ದ ವಿಶ್ವನಾಥ ಮುಗೇರ .ಕೆ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ಮೀನಾಕ್ಷಿ ಹಾಗೂ ಸಹೋದರ ಸಹೋದರಿಯರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಕಳೆದ 37 ವರ್ಷಗಳಿಂದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಜವಾನ ಮತ್ತು ಕಾವಲುಗಾರ ಹುದ್ದೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದರು.