ವಿನೋಬನಗರ: ಶ್ರೀ ಸುಬ್ರಾಯ ಅನಂತ ಕಾಮತ್ & ಸನ್ಸ್ ಸಂಸ್ಥೆಯಲ್ಲಿ ಸ್ಥಾಪಕ ದಿ. ಉಪೇಂದ್ರ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

0

ಜಾಲ್ಸೂರು ಗ್ರಾಮದ ವಿನೋಬನಗರದ ಶ್ರೀ ಸುಬ್ರಾಯ ಅನಂತ ಕಾಮತ್ & ಸನ್ಸ್ ಗೇರುಬೀಜ ಕಾರ್ಖಾನೆಯ ವತಿಯಿಂದ ಸ್ಥಾಪಕರಾದ ದಿ. ಕೆ. ಉಪೇಂದ್ರ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ಮೇ.15ರಂದು ಸಂಜೆ ನಡೆಯಿತು.

ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಸಲಹೆಗಾರರಾದ ನ.ಸೀತಾರಾಮ ಅವರು ದಿ. ಉಪೇಂದ್ರ ಕಾಮತ್ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ರಮಾನಾಥ ಶೆಣೈ , ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಕಾರ್ಮಿಕವೃಂದದವರು ಉಪಸ್ಥಿತರಿದ್ದರು.