ಬಾಳಿಲ ಬಳಿ ವಿದ್ಯುತ್ ನಿರ್ವಹಣೆಗಾಗಿ ಟಿಸಿ ಇರುವ ಕಂಬಕ್ಕೆ ಹತ್ತಿದಾಗ ಶಾಕ್ ಹೊಡೆದು ಮೆಸ್ಕಾಂ ಸಿಬ್ಬಂದಿ ಗಾಯಗೊಂಡ ಘಟನೆ ಮೇ.18ರಂದು ನಡೆದಿದೆ.
ಮೆಸ್ಕಾಂ ಸಿಬ್ಬಂದಿ ಮಂಜು ಎಂಬವರು ಪೂರ್ವಾಹ್ನ 11 ಗಂಟೆ ಸುಮಾರಿಗೆ ವಿದ್ಯುತ್ ದುರಸ್ತಿಗಾಗಿ ಟ್ರಾನ್ಸ್ ಫಾರ್ಮರ್ ಇರುವ ಕಂಬಕ್ಕೆ ಹತ್ತಿದಾಗ ವಿದ್ಯುತ್ ಶಾಕ್ ಹೊಡೆದಿತ್ತೆನ್ನಲಾಗಿದೆ.
ಈ ಸಂದರ್ಭದಲ್ಲಿ ಅವರು ಕಂಬದಿಂದ ಎಸೆಯಲ್ಪಟ್ಟರೆನ್ನಲಾಗಿದೆ. ವಿದ್ಯುತ್ ಶಾಕ್ ಹೊಡೆದ ಪರಿಣಾಮ ಭುಜ, ಕೆನ್ನೆ, ಕಾಲಿನ ಭಾಗ ಮೆಲ್ಟ್ ಆಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.