ಸುನ್ನಿ ಮುಸ್ಲಿಂ ಜುಮಾ ಮಸೀದಿ, ನುಶ್ರತುಲ್ ಇಸ್ಲಾಂ ಅಸೋಸಿಯೇಶನ್ ಕೊಯನಾಡು ಇದರ ಆಶ್ರಯದಲ್ಲಿ ಪೋಷಕರ ಸಭೆ ಹಾಗೂ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಕಾರ್ಯಕ್ರಮ ಮತ್ತು ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಸ್ಮಾರ್ಟ್ ಸ್ಕಾಲರ್ಶಿಪ್ ಪರೀಕ್ಷೆಯ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವು ಮೇ 19 ರಂದು ನಡೆಯಿತು.
ಪಿಯುಸಿಯಲ್ಲಿ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಆಫೀದಾ ಫಾತಿಮಾ (527), ಮೊಹಮ್ಮದ್ ಅಜಿನಾಸ್ (513), ಶಿಫಾನ (510), ತಸ್ನಿಮಾ (504), ಮೊಹಮ್ಮದ್ ರಾಝಿ (494), ಆಯಿಷತುಲ್ ಆಝ್ಮೀಯಾ (491),
ಎಸ್ ಎಸ್ ಎಲ್ ಸಿ ಯಲ್ಲಿ ಫಾತಿಮಾತ್ ಸುಮ್ಮಯ್ಯ (489), ಆರ್ಫಾಜ್ ಕೆ ಎ(487) ಇಷ್ಟು ವಿಧ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು
ಈ ಸಂದರ್ಭದಲ್ಲಿ ಮಸೀದಿ ಖತೀಬ್ ಉಸ್ತಾದ್ ಮಹಮ್ಮದ್ ಸಖಾಫಿ ಅಲ್ ಹೀಕಮಿ, ಸದರ್ ಉಸ್ತಾದ್ ನೌಶದ್ ಫಾಳಿಲಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಎಸ್ ಎ, ನುಸ್ರತ್ ಇಸ್ಲಾಂ ಅಸೋಸಿಯೇನ್ ಅಧ್ಯಕ್ಷರಾದ ನಝೀರ್ ಮಾಡಶೇರಿ, ಮಸೀದಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಲವಿ ಕುಟ್ಟಿ, ಮೊಯಿದಿನ್ ಕುಂಞ, ಸಲಹಾ ಸಮಿತಿ ಸದಸ್ಯರಾದ ಹನೀಫ್ ಎಸ್ ಪಿ, ಎನ್ ಐ ಎ ಕಾರ್ಯದರ್ಶಿಯಾದ ಜುಹೈಲ್, NIA ಸದಸ್ಯ ರುನೈಝ್, UAE ಸಮಿತಿ ಸದಸ್ಯ ನಝೀರ್ ಟಿ ಕೆ, ಹಾಗೂ ಇನ್ನಿತರ ಸದಸ್ಯರು, ಜಮಾಅತರು, ಪೋಷಕರು ಊರಿನವರು ಭಾಗವಹಿಸಿದ್ದರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು