ಕೂತ್ಕುಂಜ :ಮಾಯಿಲ ಕೋಟೆ ದೈವಸ್ಥಾನದ ಜೀರ್ಣೋದ್ಧಾರ ಕುರಿತು ತಾಂಬೂಲ ಪ್ರಶ್ನಾ ಚಿಂತನೆ

0

ಪ್ರಧಾನ ಮಾಯಿಲ ಕೋಟೆ ಇದು!

ಪಂಜದ ಕೂತ್ಕುಂಜ ಗ್ರಾಮದ ಮಾಯಿಲ ಕೋಟೆಯ ಕೋಟೆ ಶ್ರೀ ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಬಗ್ಗೆ ತಾಂಬೂಲ ಪ್ರಶ್ನಾ ಚಿಂತನೆಯು ಸುದರ್ಶನ್ ಪಟ್ಟಾಜೆ ಯವರ ಮನೆಯಲ್ಲಿ ದೈವಜ್ಞ ಶ್ರೀ ಪ್ರಸಾದ್ ಪಾಂಗಣ್ಣಯ ರವರು ನಡೆಸಿ ಕೊಟ್ಟರು.

ಮಾಣಿಲ ಕ್ಷೇತ್ರ ಶ್ರೀ ಮೋಹನ್ ದಾಸ ಪರಮಹಂಸ ಸ್ವಾಮೀಜಿ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್,ಸದಾಶಿವ ಪಳಂಗಾಯ,ಸುದರ್ಶನ್ ಪಟ್ಟಾಜೆ, ಬಿಶ್ವಜಿತ್ ಪಳಂಗಾಯ,ಅಶ್ವಥ್ ಪಳಂಗಾಯ,ನಿದರ್ಶನ ಪಟ್ಟಾಜೆ,ಕುಮಾರ್ ಬಳ್ಳಕ, ಮಾಧವ ಹೆಬ್ಬಾರಹಿತ್ಲು,ಸುಂದರ ಬಳ್ಳಕ,


ಕೊಕ್ಕಡ ಮಾಯಿಲ ಕೋಟೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಜಯರಾಮ,ಗುರುಪ್ರಸಾದ್,ಶೀನಪ್ಪ ನಾಯ್ಕ ಹಾಗೂ
ಸುರೇಶ್ ಅಡ್ಡತ್ತೋಡು,ತಮ್ಮಣ್ಣ ನಾಯ್ಕ,ಬಾಳಪ್ಪ, ಚೀಮುಳ್ಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಬಂಟಮಲೆಯಲ್ಲಿದೆ ಕೋಟೆ : ಕೂತ್ಕುಂಜ ಗ್ರಾಮದ ಬಂಟಮಲೆಯಲ್ಲಿ
ಮಾಯಿಲ ಕೋಟೆ ಇದೆ. ಇಲ್ಲಿ ಅನೇಕ ವರ್ಷಗಳಿಂದ ಆರಾಧನೆಗಳು ನಿಂತು ಹೋಗಿದ್ದು ದೈವಸ್ಥಾನದ ಕುರುಹುಗಳು ಮಾತ್ರ ಉಳಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 15 ಮಾಯಿಲ ಕೋಟೆ ಇದೆ.ಇದರಲ್ಲಿ ಕೂತ್ಕುಂಜ ಗ್ರಾಮದಲ್ಲಿರುವ ಮಾಯಿಲ ಕೋಟೆ ಪ್ರಧಾನ ಕ್ಷೇತ್ರ. ಮಾಯಿಲ ಅರಸು ನಿಧನರಾದ ಸ್ಥಳ ಇದುವೆ ಎಂದು ಚಿಂತನೆಯಲ್ಲಿ ಕಂಡು ಬಂದಿದೆ.