ಐವರ್ನಾಡು : ಮರುವತ್ತಡ್ಕ ಕೆಎಫ್ ಡಿಸಿ ರಬ್ಬರ್ ತೋಟದಲ್ಲಿ ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

0

ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆಗೆ ಕಾಲಿಗೆ ಗಾಯ

ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಗೆ ಕಾರ್ಮಿಕರ ಒತ್ತಾಯ

ಐವರ್ನಾಡು ಗ್ರಾಮದ ಮರುವತ್ತಡ್ಕ ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಕೆಲವು ಕಿಡಿಗೇಡಿಗಳು ಮದ್ಯ ಸೇವಿಸಿ ಬಾಟಲಿಗಳನ್ನು ಇಡಿಯಾಗಿ ಮತ್ತು ಪುಡಿ ಮಾಡಿ ರಬ್ಬರ್ ತೋಟಕ್ಕೆ ಎಸೆಯುತ್ತಿದ್ದು ಇದರಿಂದ ಮುಂಜಾವಿನ ವೇಳೆ ಟ್ಯಾಪಿಂಗ್ ಮಾಡುವ ಕಾರ್ಮಿಕರು ಕಷ್ಟಕ್ಕೆ ಒಳಗಾಗುವ ಸನ್ನಿವೇಶ ಸೃಷ್ಠಿಯಾಗಿದೆ.

ಇಂದು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಕಾಲಿಗೆ ಬಾಟ್ಲಿ ಚೂರು ತಾಗಿ ಗಾಯವಾಗಿದ್ದು ಅವರನ್ನು ಕೂಡಲೇ ಐವರ್ನಾಡಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದು ಬಂದಿದೆ. ಮಹಿಳೆ ಧರಿಸಿದ್ದ ಶೂ ವನ್ನು ಒಟ್ಟೆ ಮಾಡಿ ಒಳಹೊಕ್ಕ ಬಾಟಲಿ ಚೂರು ಈ ಅವಾಂತರ ಮಾಡಿದೆ.

ರಬ್ಬರ್ ತೋಟದಲ್ಲಿ ಅಲ್ಲಲ್ಲಿ ಬಾಟ್ಲಿಗಳ ರಾಶಿಗಳು ಕಂಡುಬರುತ್ತಿದ್ದು ಕೆಲವು ಕಡೆಗಳಲ್ಲಿ ಬಾಟ್ಲಿಗಳನ್ನು ಒಡೆದು ಬಿಸುಡುವ ವಿಕೃತಿಯನ್ನು ಕಿಡಿಗೇಡಿಗಳು ತೋರುತ್ತಿದ್ದಾರೆ.

ಸೂಕ್ತ ಕ್ರಮಕ್ಕೆ ಕಾರ್ಮಿಕರ ಆಗ್ರಹ
ಕಿಡಿಗೇಡಿಗಳ ಕೃತ್ಯದಿಂದ ಟದಯಾಪರ್ ಗಳಿಗೆ ತೊಂದರೆಯಾಗುತ್ತಿರುವುದರಿಂದ ಕೆಎಫ್ ಡಿಸಿ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ನವರು ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಮುಖಂಡರಾಗಿರುವ ರಾಮಸ್ವಾಮಿ ( ಆನಂದ) ದರ್ಖಾಸ್ತು ರವರು ಆಗ್ರಹಿಸಿದ್ದಾರೆ.