ಉಬರಡ್ಕದ ಕಕ್ಕೆಬೆಟ್ಟಿನಲ್ಲಿ ದನದ ಹೊಟ್ಟೆಗೆ ಕತ್ತಿಯಿಂದ ಕಡಿದ ಗಾಯ : ವೈದ್ಯರಿಂದ ಚಿಕಿತ್ಸೆ

0

ಉಬರಡ್ಕ ಮಿತ್ತೂರು ಗ್ರಾಮದ ಕಕ್ಕೆಬೆಟ್ಟಿನಲ್ಲಿ ಮೇಯುತ್ತಿದ್ದ ದನದ ಹೊಟ್ಟೆಯ ಭಾಗಕ್ಕೆ ಕತ್ತಿಯಿಂದ ಕಡಿದ ಗಾಯವಾಗಿದ್ದು, ಇದನ್ನು ಕಂಡ ಸ್ಥಳೀಯರು ಸುಳ್ಯ ಪಶುಸಂಗೋಪನಾ ಇಲಾಖೆಗೆ ತಿಳಿಸಿದ್ದು, ವೈದ್ಯರು‌ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ ಘಟನೆ ವರದಿಯಾಗಿದೆ.

ಕಕ್ಕೆಬೆಟ್ಟಿನಲ್ಲಿ ಕೆಎಫ್ ಡಿಸಿ ರಬ್ಬರ್ ಪ್ಲಾಂಟೇಷನ್ ನಲ್ಲಿ ದನವೊಂದು ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡು ತಿರುಗಾಡುತಿತ್ತು.

ಇದನ್ನು ಕಂಡ ಸ್ಥಳೀಯ ರೊಬ್ಬರು ಭರ್ಜರಿಗುಂಡಿ ಗಂಗಾಧರ್ ರಿಗೆ ಮಾಹಿತಿ ನೀಡಿದರು. ಅವರು ದನವನ್ನು ನೋಡಿ ಆ ದನ ಪೂರ್ಣಚಂದ್ರ ಭರ್ಜರಿ ಗುಂಡಿಯವರದ್ದೆಂದು ತಿಳಿದು, ದನದ ಮಾಲಕರಿಗೆ ವಿಷಯ ತಿಳಿಸಿದರು. ಅವರೂ ಬಂದರು. ಜನ ಸೇರಿದರು.

ದನದ ಹೊಟ್ಟೆಯ ಭಾಗಕ್ಕೆ ಕತ್ತಿಯಿಂದ ಕಡಿದು ಕರುಳು ಹೊರ ಬಂದಂತೆ ಗಾಯ ಗಂಭೀರವಾಗಿ ಕಾಣುತಿತ್ತು. ಬಳಿಕ ಪಶು ಇಲಾಖೆಗೆ ಮಾಹಿತಿ ನೀಡಿ, ಡಾ. ನಾಗರಾಜ್ ರವರು ತಂಡದೊಂದಿಗೆ ಸ್ಥಳಕ್ಕೆ ಬಂದು ದನಕ್ಕೆ ಚಿಕಿತ್ಸೆ ನೀಡಿದರು. ಬಳಿಕ ದನವನ್ನು ಮಾಲಕರು ಮನೆಗೆ ಕೊಂಡು ಹೋದರೆಂದು ತಿಳಿದುಬಂದಿದೆ.

ಆದರೆ ದನಕ್ಕೆ ಆ ರೀತಿ ಕತ್ತಿಯಲ್ಲಿ ಕಡಿದವರು ಯಾರೆಂದು ತಿಳಿದುಬಂದಿಲ್ಲ.