ಉದ್ಯೋಗಾಸಕ್ತ ವಿದ್ಯಾರ್ಥಿಗಳಿಗೆ ಅತೀ ದೊಡ್ಡ ಅವಕಾಶ
ಪದವಿ ಶಿಕ್ಷಣ ಮುಗಿಸಿ ಅಥಾವ ಸ್ನಾತಕೋತ್ತರ ಪದವಿಯನ್ನು ಪಡೆದ ನಂತರ ಕೈಯಲ್ಲಿ ರೆಸ್ಯೂಮ್ ಹಿಡಿದುಕೊಂಡು ಕೆಲಸ ಹುಡುಕಿಕೊಂಡು ಅಲೆಯುವ ಕಷ್ಟ ಬೇಡ ಅನ್ನೋರಿಗೆ ಕ್ಯಾಂಪಸ್ ಪ್ಲೇಸ್ಮೆಂಟ್ ಎನ್ನುವುದು ತುಂಬಾ ದೊಡ್ಡ ಅವಕಾಶ ಒದಗಿಸುತ್ತಿದೆ.
ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ ಹಾಗೂ ಪದವಿ ಪೊರೈಸಿರುವ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಅನೇಕ ಕಂಪೆನಿಗಳು ಕಾಲೇಜು ಕ್ಯಾಂಪಸಿಗೆ ಬಂದು ಸಂದರ್ಶನ ಮಾಡಿ ವಿವಿಧ ಹುದ್ದೆಗಳಿಗೆ ಅರ್ಹ ಹಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇಂತಹ ಸುವರ್ಣಾವಕಾಶ ಸುಳ್ಯ ನೆಹರು ಮೆಮೋರಿಯಲ್ ಕಾಲೇಜು ವತಿಯಿಂದ ನೆಹರು ಮೆಮೋರಿಯಲ್ ಕಾಲೇಜು ಕ್ಯಾಂಪಸ್ ನಲ್ಲಿ ಮೆ.28 ರಂದು ಎನ್ನೆಂಸಿ ಟ್ಯಾಲೆಂಟ್ ಹೈರ್ 2024 ಪ್ಲೇಸ್ಮೆಂಟ್ ಡ್ರೈವ್ ನಡೆಯಲಿದೆ ಎಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎನ್ನೆಂಸಿ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ತಿಳಿಸಿದರು.
ಈ ಉದ್ಯೋಗ ಮೇಳವು ಬಿ.ಎ,ಬಿಎಸ್ಸಿ, ಬಿಕಾಂ,ಬಿಬಿಎ,ಬಿಎಸ್ ಡಬ್ಲ್ಯೂ, ಬಿಸಿಎ,ಹೀಗೆ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅವಕಾಶ ಒದಗಿಸುತ್ತದೆ.
ಕ್ಯಾಂಪಸ್ ನಲ್ಲಿ ದಾಖಲಾತಿ ಮೆ.28 ರಂದು ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳುತ್ತದೆ.
ಟ್ಯಾಲೆಂಟ್ ಹೈರ್ ಇದರ ಉದ್ಘಾಟನೆಯನ್ನು ಅಕಾಡೆಮಿ ಅಫ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಉದ್ಘಾಟಿಸಲಿದ್ದಾರೆ.
ಉದ್ಯೋಗ ಮೇಳವನ್ನು ಸತತ ಮೂರು ವರ್ಷಗಳಿಂದ ಆಯೋಜಿಸುತ್ತ ಬಂದಿದ್ದೇವೆ ಕಳೆದ ವರ್ಷ ಮಾಜಿ ಸಚಿವ ಎಸ್ ಅಂಗಾರ ರವರ ಸಹಕಾರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 1724 ಉದ್ಯೋಗ ಅಕಾಂಕ್ಷಿಗಳು ನೋಂದಾವಣೆ ಮಾಡಿದ್ದರು 1128 ಅಭ್ಯರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದರು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಮೇಳದಲ್ಲಿ 22 ಕ್ಕಿಂತ ಹೆಚ್ಚಿನ ಸಂಸ್ಥೆಗಳು ಸಂದರ್ಶನಕ್ಕೆ ಅಗಮಿಸುತ್ತಿದ್ದು ಇದರ ಪ್ರಯೋಜನವನ್ನು ನಮ್ಮ ಸುಳ್ಯ ಪರಿಸರದ ಜನತೆ ಹಾಗೂ ಪುತ್ತೂರು,ಮಡಿಕೇರಿ ತಾಲೂಕಿನ ಹಾಗೂ ಸಮೀಪದ ಇನ್ನಿತರ ಗ್ರಾಮೀಣ ಬಾಗದ ಅಭ್ಯರ್ಥಿಗಳಿಗೂ ಅವಕಾಶ ಕಲ್ಲಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಮೇಳದ ಅಯೋಜನೆ ಅಧಿಕಾರಿ 8150088999 ಸಂಪರ್ಕಿಸ ಬಹುದು.
ಪತ್ರಿಕಾಗೋಷ್ಠಿಯಲ್ಲಿ ಎನ್ನೆಂಸಿ ಆಡಳಿತ ಸಮಿತಿ ಗೌರವ ಸಲಹೆಗಾರರಾದ ಪ್ರೋ.ಬಾಲಚಂದ್ರ ಗೌಡ,ಪ್ರಾಧ್ಯಾಪಕರಾದ ಭವ್ಯ ಜಿ,ಕುಲದೀಪು ಪೆಲ್ತಡ್ಕ,ಹರಿಪ್ರಸಾದ್,ವಿಷ್ಣು ಪ್ರಶಾಂತ್ ಉಪಸ್ಥಿತರಿದ್ದರು