ಕೊಯಿಕುಳಿ ಹಿ.ಪ್ರಾ.ಶಾಲೆಯಲ್ಲಿ ಪರಿಸರ ಸ್ವಚ್ಚತೆ- ಶ್ರಮದಾನ

0


ಶತಮಾನೋತ್ಸವದ ಸಂಭ್ರಮದಲ್ಲಿರುವ ದುಗ್ಗಲಡ್ಕ ಸಮೀಪದ ಕೊಯಿಕುಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭಕ್ಕೆ ಮುಂಚಿತವಾಗಿ ಪರಸರ ಸ್ವಚ್ಛತೆಯನ್ನು ಶ್ರಮದಾನದ ಮೂಲಕ ಮೇ.26 ರಂದು ನಡೆಸಲಾಯಿತು.


ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಪೋಷಕರು, ವಿದ್ಯಾಭಿಮಾನಿಗಳು, ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದರು. ಶಾಲಾ ಕೊಠಡಿ ಮತ್ತು ಪರಿಸರವನ್ನು ಸ್ವಚ್ಚಗೊಳಿಸಲಾಯಿತು.
ಶ್ರಮದಾನಕ್ಕೆ ಬೇಕಾದ ಪರಿಕರಗಳನ್ನು ಅವರವರೇ ತಂದು ಸಹಕರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಎಂ.ಜೆ., ಶಾಲಾ ಮುಖ್ಯ ಶಿಕ್ಷಕ ಮಾಧವ ಮೂಕಮಲೆ, ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ, ಮಾಜಿ ನ.ಪಂ.ಸದಸ್ಯ ಇಬ್ರಾಹಿಂ ನೀರಬಿದಿರೆ, ಎಸ್ ಡಿ ಎಂ ಸಿ. ಉಪಾಧ್ಯಕ್ಷ ಗಂಗಾಧರ ನೀರಬಿದಿರೆ ಮೊದಲಾದವರು ಭಾಗವಹಿಸಿದರು.