ಮದರಸಾ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ದ. ಕ ಜಿಲ್ಲಾ ಹಾಗೂ ಸುಳ್ಯ ರೇಂಜ್ ಜಂಟಿ ಸಭೆ

0

ಸುಳ್ಯ: ದ.ಕ ಜಿಲ್ಲಾ ಸಮಸ್ತ ಮದರಸ ಮ್ಯಾನೇಜ್’ಮೆಂಟ್ ಅಸೋಸಿಯೇಷನ್ ಹಾಗೂ ಸುಳ್ಯ ರೇಂಜ್ ಸಮಿತಿಯ ಜಂಟಿ ಸಭೆ ಮೇ 28 ರಂದು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷರಾದ ಎಂ.ಎಚ್ ಮೊಯಿದ್ದೀನ್ ಹಾಜಿ ಯುವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮದರಸಾ ಶಿಕ್ಷಣದ ಅಭಿವೃದ್ಧಿ,ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡಿ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಿ ಅವರನ್ನು ಮಾದರಿ ವಿದ್ಯಾರ್ಥಿಗಳಾಗಿ ರೂಪಿಸಬೇಕಾಗಿದೆ ಎಂದು ಒಮ್ಮತದ ಅಭಿಮತ ವ್ಯಕ್ತ ಪಡಿಸಲಾಯಿತು.ಈ ನಿಟ್ಟಿನಲ್ಲಿ ಸಮಸ್ತ ನಡೆಸುತ್ತಿರುವ +2 ವರೆಗಿನ ಮದ್ರಸಗಳು ಪೂರಕವಾಗಿದೆ.1ನೇ ತರಗತಿಯಿಂದ ಮದ್ರಸಾ ಕಲಿಕೆ ಆರಂಭಿಸುವ ವಿದ್ಯಾರ್ಥಿಗಳು ಕಲಿಕೆಯನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಿರುವುದು ಇಂದಿನ ಅನಾಹುತಗಳಿಗೆ ಕಾರಣವಾಗಿದ್ದು ವಿದ್ಯಾರ್ಥಿಗಳನ್ನು ಮರಳಿ ಮದ್ರಸಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಬೇಕು ಎಂದು ಸಭೆ ಕರೆನೀಡಿತು.

ಅಬ್ದುಲ್ ಕರೀಂ ದಾರಿಮಿ ಉಸ್ತಾದ್ ಕುಂಬ್ರ ದುಆ ನೆರೆವೇರಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಮುದರಸಾ ಮುಅಲ್ಲಿಮ್ ನಸೀಹ್ ದಾರಿಮಿ ನೆರೆವೇರಿಸಿದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಸ್ವಾಗತಿಸಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.


ಮುಹಮದ್ ನವಮಿ ಉಸ್ತಾದ್ ಮುಂಡೋಳೆ ಪ್ರಾಸ್ತಾವಿಕ ಭಾಷಣಗೈದರು. ಸಮಸ್ತ ನಡೆಸುತ್ತಿರುವ ಶೈಕ್ಷಣಿಕ ಕ್ರಾಂತಿ ಬಗ್ಗೆ ಮುಫತ್ತಿಶ್ ಹಂಝ ಫೈಝಿ ಹಾಗೂ ಮ್ಯಾನೇಜ್ಮೆಂಟ್ ಜವಾಬ್ಧಾರಿ ಬಗ್ಗೆ ಇಕ್ಬಾಲ್ ಮಿತ್ತಬೈಲ್ ತರಗತಿ ನಡೆಸಿದರು.


ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಶುದ್ದೀನ್ ದಾರಿಮಿ ಶುಭ ಹಾರೈಸಿದರು. ಜಿಲ್ಲಾ ಉಪಾಧ್ಯಕ್ಷರಾದ ಅಬೂಸಾಲಿ ಹಾಜಿ ಕಿನ್ಯ ,ಮೆಟ್ರೋ ಶಾಹುಲ್ ಹಮೀದ್ ಹಾಜಿ,ಯೂಸುಫ್ ಬದ್ರಿಯಾ,ಮುಯಿಯ್ಯದ್ದಿನ್ ಗುಂಡುಕಲ್ಲು ,ಜಿಲ್ಲಾ ಕೋಶಾಧಿಕಾರಿ ಬಾಯಂಬಾಡಿ ಅಬ್ದುಲ್ ಖಾದರ್ ಹಾಜಿ,ಜೊತೆ ಕಾರ್ಯದರ್ಶಿ ರಹಿಮಾನ್,ಸಿದ್ದಿಕ್ ನೀರಾಜೆ,ಬೆಳ್ಳಾರೆ ಜಮಾಅತಿನ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್ ಹಾಜಿ ಮಂಗಳ ಹಾಗೂ ರೇಂಜ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಳ್ಯ ರೇಂಜ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿಯಾದ ಯು.ಪಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು.ಸುಳ್ಯ ರೇಂಜ್ ಅಧ್ಯಕ್ಷ ತಾಜ್ ಮುಹಮ್ಮದ್ ಸುಳ್ಯ ಧನ್ಯವಾದ ಸಮರ್ಪಿಸಿದರು.