ತೊಡಿಕಾನ ಬಿ.ಎಸ್.ಎನ್.ಎಲ್. ಟವರ್ ನಿಂದ ನೆಟ್ ವರ್ಕ್ ಸಮಸ್ಯೆ : ಪರಿಹಾರಕ್ಕೆ ಆಗ್ರಹ – ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು

0

ತೊಡಿಕಾನದಲ್ಲಿರುವ ಬಿ.ಎಸ್.ಎನ್.ಎಲ್ ಟವರ್ ನಲ್ಲಿ ನೆಟ್ ವರ್ಕ್ ಸಮಸ್ಯೆ ಎದುರಾಗಿದ್ದು ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮೇ.29ರಂದು ತೊಡಿಕಾನ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿ ಸಮಸ್ಯೆಯ ಕುರಿತು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರು ತೊಡಿಕಾನ ಗ್ರಾಮದಲ್ಲಿ 2009 ರಲ್ಲಿ ಬಿಎಸ್ ಎನ್ ಎಲ್ ಟವರ್ ನಿರ್ಮಾಣವಾಗಿ 2015 ರವರೆಗೆ ಯಾವುದೇ ಸಮಸ್ಯೆ ಇಲ್ಲದೆ ಸಾರ್ವಜನಿಕರಿಗೆ ಉಪಯೋಗ ದೊರೆತಿದೆ. ಈಗ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಮೊಬೈಲ್ ಬಂದ ಬಳಿಕ ಲ್ಯಾಂಡ್ ಲೈನ್ ಕನೆಕ್ಷನ್ ಅನ್ನು ಬಹುತೇಕ ಜನರು ಡಿಸ್ ಕನೆಕ್ಟ್ ಮಾಡಿದರು.


ಈಗ ಅತ್ತ ಲ್ಯಾಂಡ್ ಲೈನ್ ಇಲ್ಲ, ಇತ್ತ ಮೊಬೈಲ್ ನೆಟ್ವರ್ಕ್ ಇಲ್ಲ ಇಂತಹ ಪರಿಸ್ಥಿತಿ ತೊಡಿಕಾನ ಗ್ರಾಮದ 80% ಜನರು ಅನುಭವಿಸುತ್ತಿದ್ದಾರೆ.


ಇವರ ಈ ಸಮಸ್ಯೆ ಕೇಳಲು ಯಾರೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲದಂತಾಗಿದೆ. ಅದರಿಂದ ತೊಡಿಕಾನ ಗ್ರಾಮದ ಜನರ ಸಮಸ್ಯೆ ಪರಿಹಾರ ಸಿಗಬೇಕು ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಮಾತನಾಡಿ ಸರಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಮೊಬೈಲ್ ಮೂಲಕ ಒಟಿಪಿ ವಿಧಾನ ಮೂಲಕ ಪಡೆಯುವಂತ ವ್ಯವಸ್ಥೆ ಚಾಲ್ತಿಯಲ್ಲಿದೆ. ಆದರಿಂದ ನಮ್ಮ ತೊಡಿಕಾನ ಗ್ರಾಮದ 70%ರಿಂದ. 75% ಜನರು ಸರಕಾರಿ ಇನ್ನಿತರ ಮೊಬೈಲ್ ಮೂಲಕ ಆಗುವ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಇದರ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸೇರಿಕೊಂಡು ಬಿಎಸ್ಎನ್ಎಲ್ ಅಧಿಕಾರಿಗಳು ಕಛೇರಿಯ ಧರಣಿ ಕುಳಿತು ಪ್ರತಿಭಟನೆ ಮಾಡುತ್ತೆವೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಭವಾನಿ,ಗ್ರಾಮಪಂಚಾಯತ್ ಸದಸ್ಯ ರವೀಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ವಿಜಯಕುಮಾರ್ ಉಪಸ್ಥಿತರಿದ್ದರು.