ಸುಳ್ಯ: ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

0

ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನೆ

ಸುಳ್ಯ ಕೆಎಸ್‌ಆರ್ಟಿಸಿ ಬಸ್ಸು ನಿಲ್ದಾಣದ ಬಳಿ ಖಾಸಗಿ ಕಟ್ಟಡದ ಮುಂಭಾಗ ಇಂದು ಮುಂಜಾನೆ ಅಪರಿಚಿತ ವ್ಯಕ್ತಿಯ ಮೃತ ದೇಹ ಕಂಡುಬಂದಿದ್ದು, ಮೃತ ದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸುಳ್ಯ ಪ್ರಗತಿ ಆಂಬುಲೆನ್ಸ್ ಚಾಲಕ ಅಚ್ಚು ಪ್ರಗತಿ ಇಂದು ಮುಂಜಾನೆ ಸುಮಾರು ೫:೩೦ ಗಂಟೆಗೆ ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಿನ್ನೆ ರಾತ್ರಿ ಸಮಯದಲ್ಲಿಯೇ ಮೃತಪಟ್ಟಿರುವ ಶಂಕೆ ಇದ್ದು ವ್ಯಕ್ತಿಯ ಗುರುತು ಪರಿಚಯ ಇನ್ನೂ ತಿಳಿದುಬಂದಿಲ್ಲ.