ತೊಡಿಕಾನ ಶಾಲಾರಂಭ : ಆರತಿ ಬೆಳಗಿ ಸ್ವಾಗತ

0

ತೊಡಿಕಾನ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯಲ್ಲಿ ಮೇ.31 ರಂದು ಶಾಲಾರಂಭ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂವು ನೀಡಿ ಸ್ವಾಗತಿಸಲಾಯಿತು.
ಶಾಲಾ ಶಿಕ್ಷಕಿಯರು ಹಾಗೂ ಎಸ್. ಡಿ. ಎಂ. ಸಿ ಸದಸ್ಯೆಯರು ಮಕ್ಕಳಿಗೆ ಆರತಿ ಬೆಳಗಿದರು. ಎಸ್. ಡಿ. ಎಂ. ಸಿ ಅಧ್ಯಕ್ಷ ನವೀನ್ ಎ. ಬಿ, ಉಪಾಧ್ಯಕ್ಷೆ ಸೌಮ್ಯ ಭಟ್ , ಮುಖ್ಯ ಶಿಕ್ಷಕ ಅರುಣ್ ಕುಮಾರ್ ರವರು ಒಂದನೇ ತರಗತಿಗೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.


ಬಳಿಕ ಶಾಲೆ ತನಕ ಮೆರವಣಿಗೆ ಬಂದು ಸಭಾ ಕಾರ್ಯಕ್ರಮ ನಡೆಯಿತು. ಶಾಲಾ ಸಹಶಿಕ್ಷಕ – ಶಿಕ್ಷಕಿಯರು, ಎಸ್. ಡಿ. ಎಂ. ಸಿ ಪದಾಧಿಕಾರಿಗಳು, ಮಕ್ಕಳ ಪೋಷಕರು ಹಾಜರಿದ್ದರು.