ಅಮರಮುಡ್ನೂರು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವು ಮೇ. 24 ರಿಂದ ಪ್ರಾರಂಭಗೊಂಡು
ಮೇ.27 ರ ತನಕ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಯಾನಂದ ಪತ್ತುಕುಂಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಚೊಕ್ಕಾಡಿ ಭಾಗವಹಿಸಿದ್ದರು.
ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಯೋಗ,ಕ್ರೀಡಾ ಮಾಹಿತಿ,ಕ್ರಾಫ್ಟ್,
ಡ್ರಾಯಿಂಗ್,ಜೆ.ಜೆ.ಎಮ್ ಮಾಹಿತಿ,ಭಾಷಣ ಕಲೆ ಮತ್ತು ನಿರೂಪಣಾ ಕೌಶಲ್ಯ ತರಬೇತಿ,ಮೋಜಿನ ಗಣಿತ,ಮನೋರಂಜನಾ ಆಟಗಳನ್ನು ನಡೆಸಲಾಗಿತ್ತು.
ಗ್ರಂಥಾಲಯ ಮೇಲ್ವಿಚಾರಕ ಸಂತೋಷ್ ಮುಂಡಕಜೆ ಶಿಬಿರದ ನೇತೃತ್ವ ವಹಿಸಿದ್ದರು. ಶ್ರೀಹಾನ್ ಪ್ರಾರ್ಥಿಸಿದರು. ವಿಕ್ರಮ್.ಬಿ ಸ್ವಾಗತಿಸಿದರು.
ಕವನ ವಂದಿಸಿದರು. ಅಶ್ವಿಜ್ ಅತ್ರೇಯ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 31 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಂಚಾಯತ್ ಸಿಬ್ಬಂದಿವರ್ಗ, ಸದಸ್ಯರು ಸಹಕರಿಸಿದರು.