ಕೃಷಿ ವಿಚಾರಗೋಷ್ಠಿ
ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸಂಘದ ಶತ ಸಂಭ್ರಮದ ಕಾರ್ಯಕ್ರಮದಲ್ಲಿ ಕೃಷಿ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಅಡಿಜೆ ಪತ್ರಿಕೆಯ ಶ್ರೀ ಪಡ್ರೆ, ದಯಾ ಪ್ರಸನ್ನ ಚೀಮುಳ್ಳಿ ಉಪಸ್ಥಿತರಿದ್ದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಪಳಮಗಾಯ ವೇದಿಕೆಯಲ್ಲಿದ್ದರು. ಡಾl ಎನ್.ಎಸ್ ಗೋವಿಂದ ಅವರು ಕಾರ್ಯಕ್ರಮ ಸಂಯೋಜಿಸಿದರು.
ಅಡಿಕೆಗೆ ಪರ್ಯಾಯ ಏನು ಎಂಬುದು ಚಿಂತಿಸುವ ಕಾಲ : ಶ್ರೀಪಡ್ರೆ
ಅಡಿಕೆ ಸೋತರೆ ಪರ್ಯಾಯ ಏನು ಎಂಬುದು ಚಿಂತಿಸುವ ಕಾಲ ಬಂದಿದೆ. ಅಡಿಕೆ ಮೌಲ್ಯ ವರ್ಧನೆ ನಡೆಯುತಿಲ್ಲ. ಎಲೆ ಚುಕ್ಕಿ, ಹಳದಿ ರೋಗ ಇದೆ. ಈಗ ಮತ್ತೊಂದು ಬಂದಿದೆ. ಹಿಂಗಾರ ಕಪ್ಪಾಗುವ ರೋಗ ಇದೆ ಅಡಿಕೆ ಮಾರುಕಟ್ಟೆ ಬಿದ್ದರೆ ಏನು ಚಿಂತನೆ ಮಾಡುವ ಕಾಲ ಬಂದಿದೆ ಎಂದರು. ಇದೀಗ ಹಣ್ಣುಗಳನ್ನು ಬೆಳೆಯುವ ಕಾಲ ಬರುತ್ತಿದೆ. ಇದಕ್ಕೆ ಬೇಡಿಕೆಯೂ ಇದೆ. ರಂಬೂಟಾನ್, ಪ್ಯಾಶನ್ ಪ್ರೂಟ್, ಡ್ರಾಗನ್ ಪ್ರೂಟ್, ಪುನರ್ ಪುಳಿ ಮುಂದಿನ ದಿನಗಳಲಲ್ಲೂ ಮಾರುಕಟ್ಟೆ ಸೃಷ್ಟಿಸುವ ಹಣ್ಣುಗಳಾಗುತ್ತಿವೆ. ಅತ್ಯಂತ ಪಾಡು ಜಾಗ ಇದ್ದರೆ ಲಾಟಿ ಬಿದಿರು ಬೆಳೆಸಬಹುದು. ಇದಕ್ಕೆ ಪೋಷಣೆಯ ಅಗತ್ಯವಿಲ್ಲ. ಲಾಟಿ ಬಿದಿರಿಗೆ ಮಾರುಕಟ್ಟೆ ಇದೆ. ಕೇರಳದ ಪಾಲಕ್ಕಾಡಿಗೆ ಹೋದರೆ ಅಲ್ಲಿ ಮಾಹಿತಿ ಸಿಗುತ್ತದೆ. ಇದೇ ರೀತಿ ಬೇರೆ ಬೆಳೆಗಳನ್ನು ಬೆಳೆಸುವ ಬಗ್ಗೆ ಆಲೋಚಿಸ ಬೇಕಾಗಿದೆ ಎಂದು ಶ್ರೀ ಪಡ್ರೆ ಮಾಹಿತಿ ನೀಡಿದರು.
ನಮ್ಮೂರಿನ ಹಣ್ಣುಗಳಿಗೆ ಸುಬ್ರಹ್ಮಣ್ಯ ಒಂದೇ ಸಾಕು ಮಾರುಕಟ್ಟೆ ಮಾಡಲು : ದಯಾಪ್ರಸಾದ್ ಚೀಮುಳ್ಳು
ರಂಬೂಟಾನ್ ಹಾಗೇ ವಸೋವಾ ಎಂಬ ಹಣ್ಣು ಬಂದಿದೆ. ಹಲಸಿನ ಹಣ್ಣಿಗೆ ಮಾರುಕಟ್ಟೆ ಮಾಡಬೇಕು. ಹಲಸಿನ ಹಣ್ಣು ಬೆಳೆಸುವವರು ಫೆಬ್ರವರಿಯಲ್ಲಿ ಹಲಸು ಆಗುವಂತದನ್ನು ಮಾಡಬೇಕು. ಗುಂಪಾಗಿ ಹಣ್ಣಿನ ಬೆಳೆ ಬೆಳೆಸಿ ಮಾರುಕಟ್ಟೆ ಮಾಡಿದರೆ ಮಾರುಕಟ್ಟೆ ಉಳಿಯುತ್ತೇವೆ ಎಂದರು. ನಮ್ಮೂರಲ್ಲಿ ಮಾರುಕಟ್ಟೆ ಮಾಡಲು ಬೇರೆ ವ್ಯವಸ್ಥೆ ಬೇಕಾಗಿಲ್ಲ. ಸುಬ್ರಹ್ಮಣ್ಯ ಒಂದೇ ಸಾಕು ಎಂದು ದಯಾಪ್ರಸಾದ್ ಚೀಮುಳ್ಳು ಮಾಹಿತಿ ನೀಡಿದರು.
ಸುಬ್ರಹ್ಮಣ್ಯದಲ್ಲಿ ಮಾರುಕಟ್ಟೆ ಮಾಡಬೇಕು. ಕೃಷಿ ಗೋಷ್ಠಿ ಹಾಗೂ ಕೃಷಿ ಪ್ರವಾಸದ ಬಗ್ಗೆ ನಮ್ಮ ಸಂಘ ಚಿಂತಿಸಬೇಕು ಎಂದು ಗೋವಿಂದ ಎನ್ ಎಸ್ ನುಡಿದರು.