ಬಳ್ಪ: ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

0

ಬಳ್ಪ ಸ.ಉ.ಹಿ.ಪ್ರಾಥಮಿಕ. ಶಾಲೆಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಮೇ.31 ರಂದು ಆಚರಿಸಲಾಯಿತು.

ಹೊಸದಾಗಿ ದಾಖಲಾದ ಒಂದನೇ ಹಾಗೂ ಆರನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕವೃಂದ ಹಾಗೂ ಎಸ್.ಡಿ.ಎಂ.ಸಿ ಸಹಯೋಗದೊಂದಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು.ಶಾಲಾ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಲಾಯಿತು.


ಇದೇ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಬುಡೆಂಗಿ ವಿಧ್ಯಾರ್ಥಿಗಳಿಗೆ ಸುಮಾರು ಹದಿನೈದು ಸಾವಿರ ರೂ ಗಳ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಗಿರಿಜಾ ಕೆ ಹಾಗೂ ಶಾಲಾ ಶಿಕ್ಷಕ ಆನಂದ ವೈ.ಈ, ಇಲಾಖೆಯ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ಭವ್ಯ , ಹಾಗೂ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಭಾಗೀರಥಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ರೇವತಿ ಸ್ವಾಗತಿಸಿದರು ಮತ್ತು ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.