ಕೃತಿ ಬಿಡುಗಡೆ ಕಾರ್ಯಕ್ರಮ
ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಂಸ್ಕಾರಯುತರಾಗಿ ಸಮಾಜದಲ್ಲಿ ಬಾಳಬೇಕು ಎಂದು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ಹೇಳಿದರು.
ಅವರು ತಮ್ಮ ಆಶ್ರಮದಲ್ಲಿ ಆಶ್ರಮದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಬರೆಯುವ ಪುಸ್ತಕ ವಿತರಣೆ ಮತ್ತು ತನ್ನ 203ನೇ ಕೃತಿ ” ಸ್ವಚ್ಚ ಮಾನವನಾಗು” ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಸಾಯಿಗೀತಾ ಮಾತನಾಡಿ, ಸ್ವಾಮಿಗಳು ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡುತ್ತಿರುವುದು ಒಂದು ಶ್ರೇಷ್ಠ ಕೆಲಸ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.ಮುಂದೆ ನೀವು ಸಮಾಜದಲ್ಲಿ ಸಮಾಜಕ್ಕೆ ದಾನ ಧರ್ಮ ಮಾಡಬೇಕೆಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಭೀಮರಾವ್ ವಾಷ್ಟರ್ ಮಾತನಾಡಿ, ನಿರಂತರವಾಗಿ ಧಾನ ಧರ್ಮ ಮಾಡುತ್ತಿರುವ ಸ್ವಾಮೀಜಿಯವರ ಸಮಾಜ ಸೇವೆ ಶ್ಲಾಘನೀಯ ಎಂದು ಹೇಳಿದರು.
ಆಲೆಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದ ಮಾತನಾಡಿ, ಅನ್ನದಾನ ವಿದ್ಯಾದಾನ ಶ್ರೇಷ್ಠದಾನವಾಗಿದೆ. ಈ ಕೆಲಸಗಳನ್ನು ಸ್ವಾಮೀಜಿಯವರು ಆಶ್ರಮದಲ್ಲಿ ಮಾಡುತ್ತಿದ್ದಾರೆ. ಇದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜನನಿ ಪ್ರಾರ್ಥಿಸಿದರು.