ಮರ್ಕಂಜದ ಮುಡ್ನೂರು ಮರ್ಕಂಜ ಶಾಲಾ ಪ್ರಾರಂಭೋತ್ಸವ

0

ಮರ್ಕಂಜದ ಮುಡ್ನೂರು ಮರ್ಕಂಜ ಶಾಲಾ 2024-25ನೇ ಸಾಲಿನ ಪ್ರಾರಂಭೋತ್ಸವವು ಮೇ.31ರಂದು ನಡೆಯಿತು.

ಪೋಷಕರ ಹಾಗೂ ಶಿಕ್ಷಕರ ಸಹಕಾರದಿಂದ ಶಾಲೆಯನ್ನು ತಳಿರು- ತೋರಣಗಳಿಂದ ಶೃಂಗರಿಸಲಾಗಿತು.

ಎಲ್ಲಾ ನೂತನ ವಿದ್ಯಾರ್ಥಿಗಳನ್ನು ಬ್ಯಾಂಡ್ ಸೆಟ್ ನ ಮೂಲಕ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು.

ಈ ಸಂಧರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರಾದ ದೇವರಾಜ್, ಸಹಶಿಕ್ಷಕರಾದ ಬೆಳ್ಯಪ್ಪ ಕೊಡ್ತುಗುಳಿ, ಅಶ್ವಿನಿ ಮುಂಡೋಡಿ , ಯಶಸ್ವಿನಿ ಕೆ. ಎಸ್ , ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅನಿಲ್ ಅಂಬೆಕಲ್ಲು, ಪೋಷಕ ಪ್ರತಿನಿಧಿ ಅನಿತಾ , ಅನ್ನಪೂರ್ಣ ಭೋಜನಾಲಯದ ಕಟ್ಟಡ ಸಮಿತಿ ಅಧ್ಯಕ್ಷ ಹೇಮಕುಮಾರ್ ಜೋಗಿಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸ್ .ಡಿ .ಎಂ.ಸಿ ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿಯವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಸಹಶಿಕ್ಷಕರಾದ ಬೆಳ್ಯಪ್ಪ ಕೋಡ್ತುಗುಳಿ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ದೇವರಾಜ್ 2024-25 ಶೈಕ್ಷಣಿಕ ಚಟುವಟಿಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಸಹಶಿಕ್ಷಕಿ ಅಶ್ವಿನಿ ಮುಂಡೋಡಿ ವಂದಿಸಿದರು. ಸಭೆಯಲ್ಲಿ ಸಹಶಿಕ್ಷಕಿಯಾದ ಯಶಸ್ವಿನಿ ಕೆ.ಎಸ್ , ಎಸ್.ಡಿ.ಎಂ ಸಿ ಉಪಾಧ್ಯಕ್ಷರಾದ ಅನಿಲ್ ಅಂಬೆಕಲ್ಲು, ಶಾಲಾಬಿವೃದ್ದಿ ಸಮಿತಿಯ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು.

ಮಧ್ಯಾಹ್ನ ಪಾಯಸದ ಸಿಹಿ ಊಟ ವನ್ನು ಮಕ್ಕಳಿಗೆ ನೀಡಲಾಯಿತು.