ಚೆಂಬು ಪ್ರೌಢಶಾಲಾ ಹಿಂದಿ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಪಿ.ಎಸ್. ನಿವೃತ್ತಿ

0

ಚೆಂಬು ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕಿ ಶ್ರೀಮತಿ ಕಾಮಾಕ್ಷಿ ಪಿ.ಎಸ್. ಅವರು ತಮ್ಮ ಸುದೀರ್ಘ 25 ವರ್ಷಗಳ ಶಿಕ್ಷಕ ವೃತ್ತಿ ಜೀವನದಿಂದ ಮೇ.31ರಂದು ನಿವೃತ್ತಿ ಹೊಂದಿದರು.

ಮೂಲತ: ಬೆಂಗಳೂರಿನವರಾಗಿರುವ ಶ್ರೀಮತಿ ಕಾಮಾಕ್ಷಿ ಅವರು 1985ರಲ್ಲಿ ಚೆಂಬು ಗ್ರಾಮದ ಸುಬ್ರಹ್ಮಣ್ಯ ಉಪಾಧ್ಯಾಯ ಅವರನ್ನು ವಿವಾಹವಾಗಿ ಬಳಿಕ ಸುಳ್ಯದಲ್ಲಿ ನೆಲೆಸಿದ್ದರು. ಬಳಿಕ ಚಿಕ್ಕಬಳ್ಳಾಪುರದಲ್ಲಿ ಟಿ.ಸಿ.ಎಚ್. ತರಬೇತಿಯನ್ನು ಪಡೆದು ಸರ್ಕಾರಿ ಸೇವೆಗೆ ನೇಮಕಗೊಂಡರು.

ಪೆರಾಜೆ ಗ್ರಾಮದ ಕನ್ನಡ ಪೆರಾಜೆ ಶಾಲೆಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ, ಚೆಂಬು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏಳು ವರ್ಷ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಒಂದು ವರ್ಷ ವಿರಾಜಪೇಟೆ ಜ್ಯೂನಿಯರ್ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ನಿಯುಕ್ತಿಗೊಂಡರು. 2012ರಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಗೆ ಹಿಂದಿ ಭಾಷಾ ಶಿಕ್ಷಕಿಯಾಗಿ ವರ್ಗಾವಣೆಗೊಂಡ ಶ್ರೀಮತಿ ಕಾಮಾಕ್ಷಿಯವರು 14 ವರ್ಷಗಳ ಕಾಲ ಚೆಂಬು ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿ, ಮೇ.31ರಂದು ಒಟ್ಟು ತಮ್ಮ 25 ವರ್ಷಗಳ ಶಿಕ್ಷಕ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದ್ದಾರೆ.

ಇವರ ಪತಿ ಸುಬ್ರಹ್ಮಣ್ಯ ಉಪಾಧ್ಯಾಯರು ಮಡಿಕೇರಿ ಎ.ಪಿ.ಎಂ.ಸಿ.ಯ ಮಾಜಿ ಅಧ್ಯಕ್ಷರಾಗಿದ್ದು, ಅನುಭವಿ ರಾಜಕಾರಣಿಯಾಗಿದ್ದಾರೆ. ಓರ್ವ ಪುತ್ರ ಫಲ್ಗುಣ ಪಿ.ಎಸ್. ಅವರು ಮಾಹೆ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ‌. ಸೊಸೆ ಶ್ರೀಮತಿ ಶ್ರೀಲೇಖ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.