ದೈಹಿಕ ಶಿಕ್ಷಣ ಶಿಕ್ಷಕ, ತರಬೇತುದಾರ ಯಡೂರು ಆನಂದ ನಿವೃತ್ತಿ

0

ಕ್ರೀಡಾಪಟು, ಮಡಿಕೇರಿ ತಾಲ್ಲೂಕು ಸ.ಮಾ.ಪ್ರಾ. ಶಾಲೆ ಪೆರಾಜೆ ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ಕಬಡ್ಡಿ ರಾಜ್ಯ ಮತ್ತು ರಾಷ್ಟ್ರಮಟ್ಟದ ತೀರ್ಪುಗಾರರಾದ
ಯಡೂರು ಆನಂದ ಮೇ.೩೧ ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕರಾಗಿ ಪಾಂಡ೦ಡ ಸುಬ್ಬಮ್ಮ ನಂಜಪ್ಪ ಪ್ರೌಡಶಾಲೆ ಗರ್ವಾಲೆ ಇಲ್ಲಿಗೆ ಸೇರಿದ ಇವರು ಬಳಿಕ ಸ.ಮಾ.ಪ್ರಾ. ಶಾಲೆ ಪೆರಾಜೆ ಮಡಿಕೇರಿ ತಾಲ್ಲೂಕು, ಸ.ಮಾ.ಪ್ರಾ ಶಾಲೆ ಕೂಡಿಗೆ ಮತ್ತು ಕೊಡಗು ಜಿಲ್ಲಾ ಶಿಕ್ಷಕ ಶಿಕ್ಷಣ ತರಬೇತಿ ಕೇಂದ್ರ ಕೊಡಿಗೆ, ಸ.ಹಿ.ಪ್ರಾ.ಶಾಲೆ ಬೆಟ್ಟದಳ್ಳಿ ಸೋಮವಾರಪೇಟೆ ತಾಲ್ಲೂಕು ಬಳಿಕ ಸ.ಹಿ.ಪ್ರಾ.ಶಾಲೆ ಚೌಡ್ಲುವಿನಲ್ಲಿ ಪ್ರಸ್ತುತ ಸೇವೆ ಸಲ್ಲಿಸಿ 30 ವರ್ಷಗಳ ಸುಧೀರ್ಘ ಸೇವೆಯಿಂದ ನಿವೃತ್ತರಾಗಿದ್ದಾರೆ.

ಇದರೊಂದಿಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 75ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಬಿ.ಓ. ಇಲಾಖೆಯ ಆದೇಶದ ಮೇರೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿಯೋಜನೆ ಗೊಂಡಿದ್ದರು.

ಯಡೂರು ಉದಯ ಯುವಕ ಸಂಘದ ಅಧ್ಯಕ್ಷನಾಗಿ ಕಬಡ್ಡಿ ತಂಡದ ನಾಯಕನಾಗಿ 70 ಪಾರಿತೋಷಕ ತರಲು ಕಾರಣರಾಗಿದ್ದಾರೆ.


ಬಿ.ಟಿ.ಸಿ.ಜಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುವಾಗ ಮಂಗಳೂರು ವಿಶ್ವವಿದ್ಯಾನಿಲಯ ಮ್ಯಾರಥನ್ ಓಟದಲ್ಲಿ ಭಾಗವಹಿಸಿದ್ದಾರೆ.

ಕಬಡ್ಡಿಯಲ್ಲೂ ಕೂಡ ವಿ.ವಿ. ಮಟ್ಟದಲ್ಲಿ ಭಾಗವಹಿಸಿದ್ದಾರೆ. ಪೆರಾಜೆ, ಕೂಡಿಗೆ, ಬೆಟ್ಟದಳ್ಳಿ, ಶಾಲೆಯಲ್ಲಿ ಕೆಲಸ ಮಾಡುವಾಗ ಅನೇಕ ವಿದ್ಯಾರ್ಥಿಗಳನ್ನು ಮೇಲಾಟ ಮತ್ತು ಗುಂಪು ಆಟದಲ್ಲಿ ವಿಭಾಗ ಮಟ್ಟದಲ್ಲಿ ಭಾಗವಹಿಸಲು ಕಾರಣರಾಗಿದ್ದಾರೆ.

ಕಬಡ್ಡಿಯಲ್ಲಿ 3ಬಾರಿ ರಾಜ್ಯಮಟ್ಟಕ್ಕೆ, 2 ಬಾರಿ ವಿಭಾಗ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಪೆರಾಜೆ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ವನಿತ 2007 ರಲ್ಲಿ ಮಹಿಳಾ ವಿಭಾಗದಲ್ಲಿ ರಾಷ್ಟ್ರ ಮಟ್ಟದಲಿ ಕಬಡ್ಡಿ ಆಡಿರುತ್ತಾಳೆ. 1896 ರಲ್ಲಿ ಕೆ.ಆರ್ ಲಲಿತ ಎಂಬ ವಿದ್ಯಾರ್ಥಿನಿ 800 ಮೀ ಓಟದಲ್ಲಿ ಕೊಡಗಿಗೆ ಜಿಲ್ಲಾ ಮಟ್ಟದಲ್ಲಿ ಆಡಿರುತ್ತಾಳೆ, ಪ್ರಥಮ ಸ್ಥಾನವು ದೊರಕಿದ್ದು ಇವರ ತರಬೇತಿಯಿಂದ. ಹಾಗೆಯೇ ಕೊಡಗು ಜಿಲ್ಲಾ ತಂಡದೊಂದಿಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿರಾಜ್ಯ ಮಟ್ಟದ ಮೇಲಾಟದ ಸ್ಪರ್ಧೆಯಲ್ಲಿ ಭಾಗವಹಿಸಲು ರಸ್ತೆಯನ್ನು ದಾಟುವಾಗ ವಾಹನ ಅಪಘಾತದಿಂದ ಮೃತಪಟ್ಟಿರುತ್ತಾಳೆ.
ಆ ಸಮಯದಲ್ಲಿ ಪೆರಾಜೆ ಗ್ರಾಮಸ್ಥರಿಂದ, ಸಾರ್ವಜನಿಕರಿಂದ ಸಂಘ-ಸಂಸ್ಥೆಯಿಂದ, ಶಿಕ್ಷಣ ಇಲಾಖೆಯಿಂದ, ಮಕ್ಕಳ ಕಲ್ಯಾಣ ನಿಧಿ, ಜಿಲ್ಲಾ ಪಂಚಾಯತ್‌ ಜೀವ ವಿಮಾ ನಿಗಮದಿಂದ 38೦೦೦ ರೂಗಳನ್ನು ಅವರ ಕುಟುಂಬಕ್ಕೆ ಒದಗಿಸಲಾಯಿತು. ಅವಳ ಹೆಸರಿನಲ್ಲಿ ವಿ.ಎಸ್.ಎಸ್.ಎನ್ ಬ್ಯಾಂಕ್ ಪೆರಾಜೆ ಮತ್ತು ದತ್ತು ನಿಧಿ 3೦೦೦೦ ರೂ. ನಿರುಪು ಠೇವಣಿ ಹಾಕಲಾಗಿದೆ. ಬಡ್ಡಿ ಹಣದಿಂದ ಕ್ರೀಡಾ ಉಪಕರಣ ಖರೀದಿಸಲು ಬಳಸಲಾಗುತ್ತಿದೆ. ಇದು ಇವರು ಸೇವೆಯಲ್ಲಿ ಇರುವಾಗ ಮಾಡಿದ ಕಾರ್ಯವಾಗಿದೆ.

ಪ್ರಸ್ತುತ ಇವರು ಕೊಡಗು ಜಿಲ್ಲಾ ಅಮೇಚೂರು ಕಬಡ್ಡಿ ತೀರ್ಪೂಗಾರರ ಸಂಘದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದರೊಂದಿಗೆ ಈ ಹಿಂದೆ ಕಬಡ್ಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು , 2012 ರಲ್ಲಿ ಕೊಡಗು ಜಿಲ್ಲೆಯಿಂದ ಪ್ರಥಮ ಬಾರಿಗೆ ಭದ್ರಾವತಿಯಲ್ಲಿ ನಡೆದ ಆಲ್ ಇಂಡಿಯ ಕಬಡ್ಡಿ ಟೂರ್ನಿಯಲ್ಲಿ ತೀರ್ಪೂಗಾರರಾಗಿ ಭಾಗವಹಿಸಿದ್ದಾರೆ. ಮಂಗಳೂರು ವಿ.ವಿ ಮಹಿಳೆಯರು ಮತ್ತು ಪುರುಷರ ಕಬಡ್ಡಿ ಪಂದ್ಯಾಟದಲ್ಲಿ, ಉಡುಪಿಯಲ್ಲಿ 2015ರಲಿ ಆಲ್ ಇಂಡಿಯಾ ಟೂರ್ನಿ ಕಬಡ್ಡಿ, ಒಕ್ಕಲಿಗರ ಯುವ ವೇದಿಕೆ ಸೋಮವಾರಪೇಟೆ 2016 ಕುಶಾಲನಗರ ಕೊಡಗು ಜಿಲ್ಲೆ ಪ್ರೊ. ಕಬಡ್ಡಿ 2016, ಶಿವಮೊಗ್ಗ ಆಲ್‌ಇಂಡಿಯಾಟೂರ್ನಿ 2017, ಮೈಸೂರು ಆಲ್ ಇಂಡಿಯಾ ಟೂರ್ನಿ 2018, ಕೊಡಗು ಪ್ರೊ ಕಬಡ್ಡಿ 2023 ಆಲ್ ಇಂಡಿಯಾಟೂರ್ನಿ ಸೋಮವಾರಪೇಟೆ ಇಲ್ಲಿ ತೀರ್ಪೂಗಾರರಾಗಿರುತ್ತಾರೆ.

ಕೊಡಗು ಜಿಲಾ ಅಮೆಚೂರು ಕಬಡ್ಡಿ ಅಸೋಸಿಯೆಶನ್ ಕಬಡ್ಡಿ ತೀರ್ಪೂಗಾರರ ಸಂಘವಿದ್ದು ಇವರ ಅಧ್ಯಕ್ಷತೆಯಲ್ಲಿ 30 ಜನ ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರು ಇದ್ದು ಕೊಡಗು
ಜಿಲ್ಲೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಡೆಸುವ ಕಬಡ್ಡಿ ಆಟಕ್ಕೆ ತೀರ್ಪೂಗಾರರಾಗಿ ಭಾಗವಹಿಸಿರುತ್ತಾರೆ.


ಇದರೊಂದಿಗೆ ಇವರಿಗೆ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಕ ಪ್ರಶಸ್ತಿ, ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ಪೆರಾಜೆ ಅಯ್ಯಪ್ಪ ಸ್ವಾಮಿ
ಪ್ರಶಸ್ತಿ, ಯುವಶಕ್ತಿ ಕಲಾಸಂಘ ಪೆರಾಜೆ, ಸ.ಮಾ.ಪ್ರಾ.ಶಾಲೆ ಪೆರಾಜೆ, ಶ್ರೀ ಶಕ್ತಿ ಸಂಘ ಕೋಟೆ ಪೆರಾಜೆ, ಸ.ಮಾ.ಪ್ರಾ.ಶಾಲೆ ಪೆರಾಜೆ ಸ್ಪೀಕರ್ ಬೋಪಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿದೆ.

ಸೋಮವಾರಪೇಟೆ ತಾಲ್ಲೂಕು ಯಡೂರು ಗ್ರಾಮದಲ್ಲಿ 1.6.1964 ರಂದು ಜನಿಸಿದ ಇವರ ತಂದೆ ಆಸೆಗೋಡಿ ಮನೆ ಮಾದಪ್ಪ ಮತ್ತು ತಾಯಿ ಪೊನ್ನಮ್ಮ. ಇವರ ಪತ್ನಿ ಶಿಕ್ಷಕಿ ಸರೋಜಿನಿ, ಪುತ್ರಿಯರಾದ ತನ್ವಿಕ ಮತ್ತು ಸಾನ್ವಿಕ ಪ್ರಥಮ ಪುತ್ರಿ ವಿವೇಕನಂದ ಕಾಲೇಜ್ ಪುತ್ತೂರು ಇಲ್ಲಿ 2ನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. 2 ನೇ ಪುತ್ರಿ ಒ.ಎಲ್.ವಿ ಸ್ಕೂಲ್ ಸೋಮವಾರಪೇಟೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಣ ಸ.ಹಿ.ಪ್ರಾ.ಶಾಲೆ ಯಡೂರು, ಪ್ರೌಢಶಾಲೆಕುಮಾರ ಲಿಂಗೇಶ್ವರ ಶಾಂತಳ್ಳಿ, ಪದವಿ ಬಿ.ಟಿ.ಸಿ.ಜಿ ಕಾಲೇಜುಯಡೂರಿನಲ್ಲಿ ಮುಗಿಸಿ ದೈಹಿಕ ಶಿಕ್ಷಣ ತರಬೇತಿ ಹಾಸನದಲ್ಲಿ ಮುಗಿಸಿರುತ್ತಾರೆ.