ಪುತ್ತೂರು : ಸರಕಾರಿ ಹುದ್ದೆಗಳಿಗೆ ಕರಾವಳಿ ಜನತೆ ಪ್ರಯತ್ನವೇ ಮಾಡುವುದಿಲ್ಲ ಎಂಬ ಕೂಗಿನ ಮಧ್ಯೆಯೂ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭಿಸಿ ವಿವಿಧ ನೇಮಕಾತಿಗಳ ಪರೀಕ್ಷೆಗಳಲ್ಲಿ ಭರ್ಜರಿ ಫಲಿತಾಂಶವನ್ನು ದಾಖಲಿಸುವುದರ ಮೂಲಕ ಕ್ರಾಂತಿಯನ್ನು ಉಂಟುಮಾಡುತ್ತಿರುವ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯು 2023-24 ರ ಸಾಲಿನಲ್ಲಿ ಕೆ -ಸೆಟ್ ಪರೀಕ್ಷೆಗೂ ತರಬೇತಿಯನ್ನು ಆನ್ಲೈನ್ನಲ್ಲಿ ಪ್ರಾರಂಭಿಸಿ, ಮೂವರು ಅಭ್ಯರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.
ಮಂಗಳೂರಿನ ತಲಪಾಡಿಯ ಪೂಮಣ್ಣು ನಿವಾಸಿ ದಿ.ರಮೇಶ ಸಂಧ್ಯಾರಾಣಿ ದಂಪತಿ ಪುತ್ರ , ಸದ್ಯ ಮಂಗಳೂರು ವಿಶ್ವವಿದ್ಯಾನಿಲಯ ಭೌತಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಅಖಿಲ್ ಹಾಗೂ ಪುತ್ತೂರು ತಾಲೂಕಿನ ಆರ್ಯಪು ಗ್ರಾಮದ ವಾಗ್ಲೆ ಫಾರ್ಮ್ (ಶಿವಂ ನಿಲಯ) ನಿವಾಸಿ ಎಸ್ .ಉಪೇಂದ್ರ ಮತ್ತು ನಳಿನಿ.ಕೆ ದಂಪತಿ ಪುತ್ರಿ , ಸದ್ಯ ವಿವೇಕಾನಂದ ಪದವಿ ಪೂರ್ವ ಕಾಲೇಜು ಇಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಶ್ವಿನಿ ಯು ನಾಯಕ್ ಮತ್ತು ಎಪಿಎಂಸಿ ಆದರ್ಶ ಆಸ್ಪತ್ರೆ ಬಳಿಯ ಶ್ರೀದೇವಿ ನಿಲಯ ನಿವಾಸಿ , ಸುಳ್ಯ ಪಶು ಸಂಗೋಪನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುಷ್ಪರಾಜ ಶೆಟ್ಟಿ ರವರ ಪತ್ನಿ ,ಸದ್ಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ರೂಪಲತಾ ಶೆಟ್ಟಿ ಇವರುಗಳು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಕೆ – ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರ ಸಾಧನೆಗೆ ಆಡಳಿತ ಮಂಡಳಿ ಮತ್ತು ಭೋಧಕ ವೃಂದ ಅಭಿನಂದನೆ ಸಲ್ಲಿಸಿದೆ.
ಕೆ- ಸೆಟ್ ನಿಂದ ಆಗುವ ಪ್ರಯೋಜನ…
ಕೆ -ಸೆಟ್ ಪಾಸಾದರೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ.
ಪಿ .ಎಚ್ .ಡಿ ರಿಸರ್ಚ್ ಅಪ್ಲೈ ಮಾಡಿದಾಗ ಲಿಖಿತ ಪರೀಕ್ಷೆ ಇರದೇ , ಮೌಖಿಕ ಪರೀಕ್ಷೆ ಮಾತ್ರ ಇರುತ್ತದೆ.
ಕೆ -ಸೆಟ್ ಉತ್ತೀರ್ಣರಾದವರು NET ಎಕ್ಸಾಮ್ ಉತ್ತೀರ್ಣರಾದರೆ ಆಲ್ ಓವರ್ ಇಂಡಿಯಾ ಅಸಿಸ್ಟೆಂಟ್ ಪ್ರೊಫೆಸರ್ ಗೆ ಅಪ್ಲೈ ಮಾಡಬಹುದು. ಎಯೈಡೆಡ್ ಅಥವಾ ಅನ್ಎಯೈಡೆಡ್ ಸರಕಾರಿ ಸಾಮ್ಯದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಡೈಲಿ ವೇಜಸ್ ,ಪಾರ್ಟ್ ಟೈಮ್ ಗೆ ಮೊದಲ ಆದ್ಯತೆ ಪಡೆಯಬಹುದು.
K-SET ಪಾಸದವರು NET+JRF( Junior Research pheloship) ಪರೀಕ್ಷೆ ಕೂಡ ಉತ್ತೀರ್ಣರಾದರೆ ಪಿ ಎಚ್ ಡಿ ಖಾಲಿ ಇರುವ ಯೂನಿವರ್ಸಿಟಿಗಳನ್ನು ಅಯ್ಕೆ ಮಾಡಿಕೊಳ್ಳಬಹುದು . PhD ಮಾಡುತ್ತಿರುವಾಗಲೇ ನಾಲ್ಕು ವರ್ಷದ ಅವಧಿಯಲ್ಲಿ ಪ್ರತಿ ತಿಂಗಳು 45,000 ರಿಂದ 50,000 ರಿಸರ್ಚ್ ಸಬ್ಮಿಟ್ ಆಗುವವರೆಗೂ ಫೆಲೋಶಿಪ್ ಬರುತ್ತದೆ.
………………………………….
ಉದ್ಯೋಗ ಕೌಶಲ್ಯತೆ ,ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಬಗ್ಗೆ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ತರಬೇತಿ ನೀಡಲಾಗುತ್ತಿದ್ದು, ಶಿಕ್ಷಣದಷ್ಟೇ ಒತ್ತು ಉದ್ಯೋಗ ಕೌಶಲ್ಯತೆಗೆ ನೀಡಿದ್ದಲ್ಲಿ , ಖಂಡಿತವಾಗಿ ಯಶಸ್ಸಾಗಲು ಸಾಧ್ಯ.
ಈ ನಿಟ್ಟಿನಲ್ಲಿ ನಾವು ಸತತವಾಗಿ ವಿವಿಧ ಫಲಿತಾಂಶಗಳ ಮೂಲಕ ಇದನ್ನು ರುಜುವಾತು ಮಾಡಿದ್ದೇವೆ. ಕೆ -ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಿದ್ಯಾಮಾತಾ ಅಭಿನಂದಿಸುತ್ತದೆ.
ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು ವಿದ್ಯಾಮಾತಾ ಅಕಾಡೆಮಿ