ಸವಣೂರು.ಜೂ 02:- ಸವಣೂರು ಸಮೀಪದ ಪರಣೆ ನಿವಾಸಿ ಎಚ್.ಎಂ. ಹಸೈನಾರ್ ಹಾಜಿಯವರು ಅಲ್ಪದಿನದ ಅನಾರೋಗ್ಯದಿಂದ ಇದ್ದು ಇಂದು ನಿಧನರಾದರು. ಇವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ.
ಇವರು ಪರಣೆ ಜುಮ್ಮಾ ಮಸೀದಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆಗೈದಿದ್ದರು.
ಸೃಷ್ಟಿಕರ್ತನು ಇವರ ಪರಲೋಕ ಯಾತ್ರೆಯನ್ನು ಸುಗಮಗೊಳಿಸಲಿ. ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.