ಈ ಬಾರಿಯ ಲೋಕಸಭಾ ಚುನಾವಣೆ ಜಾತ್ಯಾತೀತ ಶಕ್ತಿಗಳಿಗೆ ನಿರೀಕ್ಷೆ ಹುಟ್ಟಿಸಿದೆ ಮತ್ತು ಬಿಜೆಪಿ ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಲು ಜನ ಆದೇಶ ನೀಡಿದ್ದಾರೆಂದು ಸುಳ್ಯದ ರಾಷ್ಟ್ರ ರಕ್ಷಾ ವೇದಿಕೆ ಹೇಳಿದೆ.
ಜೂ.೬ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸುಳ್ಯ ರಾಷ್ಟ್ರ ರಕ್ಷಾ ವೇದಿಕೆಯ ಗೌರವ ಸದಸ್ಯ ಕೆ.ಪಿ. ಜಾನಿಯವರು ಈ ಬಾರಿಯ ಲೋಕಸಭಾ ಚುನಾವಣೆಯ ಮತ ಎಣಿಕೆಯ ಫಲಿತಾಂಶದ ವಿಶ್ಲೇಷಣೆ ಮಾಡು ಸಂದರ್ಭ ಬಡವರಿಗೆ, ಪ್ರಜಾಪ್ರಭುತ್ವ ವಿಶ್ವಾಸಿಗಳಿಗೆ ಮತ್ತು ಜಾತ್ಯಾತೀತ ಮನಸುಗಳಿಗೆ ಆಶಾದಾಯಕವಾಗಿ ಮೂಡಿ ಬಂದಿದೆ. ಸಂವಿಧಾನದ ತಿದ್ದುಪಡಿಸಿಗೆ ಇಳಿದ ಬಿಜೆಪಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಕರ್ನಾಟಕದಲ್ಲಿ ೨೦೧೯ರ ಫಲಿತಾಂಶಕ್ಕೆ ಹೋಲಿಸಿದರೆ ಶೇ.೫.೩ ಮತಗಳು ಬಿಜೆಪಿಗೆ ಕಡಿಮೆಯಾಗಿದೆ. ಉಳಿದಂತೆ ಹರಿಯಾಣ, ರಾಜಸ್ತಾನ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ್, ವೆಸ್ಟ್ ಬೆಂಗಾಲ್, ಮಹಾರಾಷ್ಟ್ರ, ಗುಜರಾತ್‌ನಲ್ಲಿಯೂ ಬಿಜೆಪಿ ಮತಗಳು ಕುಸಿತ ಕಂಡಿದೆ. ೨೦೧೪ರಲ್ಲಿ ಮೂರುವರೆ ಲಕ್ಷ, ೨೦೧೯ರಲ್ಲಿ ನಾಲ್ಕೂವರೆ ಲಕ್ಷ ಅಂತರದಿಂದ ಗೆದ್ದ ಪ್ರಧಾನಿ ನರೇಂದ್ರ ಮೋದಿಯವರ ಲೀಡ್ ಒಂದೂವರೆ ಲಕ್ಷಕ್ಕೆ ಕುಸಿದಿದೆ. ಇದು ಜನವಿರೋಧಿ ಆಡಳಿತಕ್ಕೆ ಉದಾಹರಣೆ ಎಂದವರು ಹೇಳಿದರು. ಧರ್ಮವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿದೆ. ಮತ್ತು ಸಂವಿಧಾನವನ್ನು ಗಾಳಿಗೆ ತೂರಿ ಬುಲ್ಡೊಜರ್ ಸಂಸ್ಕೃತಿಗೆ ಒತ್ತುಕೊಟ್ಟ ಬಿಜೆಪಿ ಸರಕಾರಕ್ಕೆ ಅಯೋಧ್ಯೆಯ ಜನರು ಹೊಡೆತ ನೀಡಿದ್ದಾರೆ ಎಂದವರು ಹೇಳಿದರು. ವೇದಿಕೆಯ ಅಧ್ಯಕ್ಷ ಲಕ್ಷ್ಮೀಶ್ ಗಬಲಡ್ಕರು ಮಾತನಾಡಿ,
ಹಿಂದೂಗಳ ಪ್ರತಿನಿಧಿಗಳೆಂದು ಕರೆಸಿಕೊಳ್ಳುವ ಸಂಘಟನೆಗಳ ಕಾರ್ಯಕರ್ತರು ಮಾತನಾಡುವ ದಾಟಿ ನೋಡಿದರೆ ಹಿಂದೂ ಧರ್ಮ ಎಂದರೆ ಅತ್ಯಂತ ಸಂಕುಚಿತವಾದುದು ಇನ್ನೊಂದು ಧರ್ಮವನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಮೆಸೇಜ್ ಕೊಡುವ ರೀತಿ ವರ್ತಿಸಿದ್ದಾರೆ. ಆಸ್ತಿಕ ಹಿಂದೂಗಳು ಇದನ್ನು ಪ್ರಶ್ನೆ ಮಾಡಿ ನಿಜವಾದ ಧಾರ್ಮಿಕತೆ ಮತ್ತು ಆಸ್ತಿಕತೆಯನ್ನು ಉಳಿಸುವ ಧ್ವನಿ ಎತ್ತುವ ಪರ್ವ ಕಾಲ ಇದಾಗಿದೆ ಎಂದ ಅವರು, ಒಂದು ರಾಜಕೀಯ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಳ್ಳುವುದೇ ಧಾರ್ಮಿಕತೆ ಎಂದಾದರೆ ಅದು ಅತ್ಯಂತ ಅಪಾಯಕಾರಿ. ಈ ನೆಲದ ಸಂಸ್ಕೃತಿಕೆ ಅದು ವಿರೋಧವಾದುದು ಎಂದು ಅವರು ಹೇಳಿದರು.
ನಗರ ಪಂಚಾಯತ್ ಸದಸ್ಯ, ವೇದಿಕೆಯ ಸದಸ್ಯ ಉಮ್ಮರ್ ಕೆ.ಎಸ್. ಮಾತನಾಡಿ ೧೦ ವರ್ಷ ಆಡಳಿತ ಬಂದ ಬಿಜೆಪಿ ಮೆಜಾರಿಟಿ ಬಂದಿಲ್ಲ. ಹೀಗಿರುವಾಗ ಪ್ರಧಾನಿಯವರು ರಾಜೀನಾಮೆ ಕೊಟ್ಟು ಹೊರಗೆ ಹೋಗಬೇಕಿತ್ತು. ಆದರೆ ಬೇರೆ ಸರಕಾರ ಬಂದರೆ ೧೦ ವರ್ಷದ ಬಣ್ಣ ಬಯಲಾಗುತ್ತದೆ ಎಂದು ಮತ್ತೆ ಅಧಿಕಾರಕ್ಕೆ ಅಂಟಿದಂತಿದೆ. ೨೨ ಸಂಸ್ಥೆಗಳನ್ನು ಮಾರಾಟ ಮಾಡಿರುವ ಮೋದಿಯವರು ಇನ್ನೂ ೫ ವರ್ಷ ಮುಂದುವರಿಯಲಿ. ಆಗ ಬಿಜೆಪಿ ಸಂಪೂರ್ಣ ನೆಲ ಕಚ್ಚುತ್ತದೆ. ನಮ್ಮ ಉzಶ ಕೂಡಾ ಗ್ರಾ.ಪಂ. ನಿಂದ ದೇಶದವರೆಗೆ ಬಿಜೆಪಿಯನ್ನು ಸೋಲಿಸುವುದೇ ಆಗಿದೆ ಎಂದವರು ಹೇಳಿದರು.
ವೇದಿಕೆಯ ಉಪಾಧ್ಯಕ್ಷ ಅಚ್ಚುತ ಮಲ್ಕಜೆ ಮಾತನಾಡಿ, ಸಂವಿಧಾನವನ್ನು ಉಳಿಸುವ ಕಾರ್ಯ ಈ ಚುನಾವನೆಯಲ್ಲಿ ಆಗಿದೆ” ಎಂದು ಹೇಳಿದರು.
ವೇದಿಕೆಯ ಭರತ್, ವಸಂತ್ ಪೆಲ್ತಡ್ಕ, ಅಶ್ರಫ್ ಎಲಿಮಲೆ ಪತ್ರಿಕಾಗೋಷ್ಠಿಯಲ್ಲಿದ್ದರು.